- Advertisement -
![]()
- Advertisement -
ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮುತುವರ್ಜಿಯಲ್ಲಿ ಇಲಂತಿಲ ಗ್ರಾಮ ಪಿದಮಲೆ ಎಂಬಲ್ಲಿಜೂನ್ 15 ರಂದು ದುರಸ್ಥಿ ಕಾರ್ಯ ನಡೆದಿದೆ. ಕುಪ್ಪೆಟ್ಟಿ–ಉಪ್ಪಿನಂಗಡಿ ರಸ್ತೆಯ ದುಸ್ಥಿತಿಯನ್ನು ಕೂಡ ಪರಿಶೀಲಿಸಿದ್ದು, ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ತಕ್ಷಣದ ಕ್ರಮವನ್ನು ಕೈಗೊಳ್ಳಲಾಯಿತು.

ಮಳೆಯ ಪರಿಣಾಮ ಉಂಟಾಗಿದ್ದ ಪಿಡಬ್ಲ್ಯುಡಿ ರಸ್ತೆಯ ಸಮಸ್ಯೆಯನ್ನು ತಾತ್ಕಾಲಿಕವಾಗಿ ನಿವಾರಣೆಗೊಳಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ವೆಟ್ ಮಿಕ್ಸ್ ಹಾಕಿ ರಸ್ತೆ ಸಮತಟ್ಟುಗೊಳಿಸುವ ಕಾರ್ಯ ನಿರ್ವಹಿಸಲಾಯಿತು.
ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಸಂಚಾರ ಸುಗಮವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
- Advertisement -


