Saturday, June 13, 2026
Homeಕರಾವಳಿಮಂಗಳೂರುಬೆಳ್ತಂಗಡಿ : ನಾಳೆಯಿಂದ ಗಡಾಯಿಕಲ್ಲು ಪ್ರವೇಶ ನಿಷೇಧ

ಬೆಳ್ತಂಗಡಿ : ನಾಳೆಯಿಂದ ಗಡಾಯಿಕಲ್ಲು ಪ್ರವೇಶ ನಿಷೇಧ

- Advertisement -
- Advertisement -

ಬೆಳ್ತಂಗಡಿ : ಪ್ರವಾಸಿ ತಾಣವಾದ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಗಡಾಯಿಕಲ್ಲು ಚಾರಣಕ್ಕೆ ಜೂ. 14 ರಿಂದ ಜಾರಿಗೆ ಬರುವಂತೆ  ಪ್ರವೇಶಕ್ಕೆ ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಗಡಾಯಿಕಲ್ಲಿಗೆ ಪ್ರವಾಸಿಗರಿಗೆ ನಿಷೇಧ ಹೇರಿದೆ.ಮಳೆಯಿಂದ ಕಲ್ಲುಗಳು ಜಾರುವ ಕಾರಣ ಪ್ರವೇಶ ನಿಷೇಧ ಹೇರಲಾಗಿದೆ ಎಂದು ವನ್ಯಜೀವಿ ವಿಭಾಗ ಪ್ರಕಟಣೆ ತಿಳಿಸಿದೆ.

ಬೇಸಿಗೆ ಕಾಲದಲ್ಲಿ ಬೆಂಕಿ ಪ್ರಕರಣ, ಕಾಡ್ಗಿಚ್ಚು ಇತ್ಯಾದಿ ಅನಾಹುತಗಳು ನಡೆಯದಂತೆ ಹಾಗೂ ಹುಲಿಗಣತಿ ಹಿನ್ನೆಲೆಯಲ್ಲಿ  ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಜೂ.೧ ರಿಂದ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಂಡು ಮೊದಲ ವಾರಾಂತ್ಯದ ಆದಿತ್ಯವಾರ ಜೂ.೭ ರಂದು 1000 ಮಂದಿ ಪ್ರವಾಸಿಗರು  ವೀಕ್ಷಿಸಿ ಇತಿಹಾಸ ನಿರ್ಮಾಣವಾಗಿತ್ತು. ಜೂ. 1 ರಿಂದ ಪ್ರವಾಸಿಗರ ವಿಕ್ಷಣೇಗೆ ಮುಕ್ತಗೊಂಡಿದ್ದ ಗಡಾಯಿಕಲ್ಲು 13 ದಿನದ ಅಂತರದಲ್ಲಿ ಮತ್ತೋಮ್ಮೆ ಪ್ರವಾಸಿಗರ ವಿಕ್ಷಣೇಗೆ ನಿಷೇಧ ಹೇರಲಾಗಿದೆ.

- Advertisement -

Latest News

error: Content is protected !!