- Advertisement -
![]()
- Advertisement -
ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಾಪಸ್ ಚೆನ್ನೈಗೆ ತೆರಳಿದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಸ್ವತಃ ತಾವೇ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ.
ಕೊಲ್ಲೂರಿನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಸುಮಾರು 125 ಕಿಲೋ ಮೀಟರ್ ದೂರ ಸಿಎಂ ವಿಜಯ್ ಕಾರು ಚಾಲನೆ ಮಾಡಿಕೊಂಡು ಬಂದಿದ್ದಾರೆ.
ಮಂಗಳೂರಿನಿಂದ ಕೊಲ್ಲೂರುವರೆಗೆ ಮತ್ತು ಕೊಲ್ಲೂರಿನಿಂದ ಮಂಗಳೂರಿನವರೆಗೆ ಸಿಎಂ ವಿಜಯ್ ರಸ್ತೆ ಮಾರ್ಗವಾಗಿ ಓಡಾಟಕ್ಕೆ ಕಾರನ್ನು ಚೆನ್ನೈನಿಂದಲೇ ತರಲಾಗಿತ್ತು.
ಮಂಗಳೂರಿನಿಂದ ವಿಶೇಷ ವಿಮಾನದ ಮೂಲಕ ವಿಜಯ್ ಚೆನ್ನೈಗೆ ತೆರಳಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಜಯ್ ನೋಡಲು ಅಭಿಮಾನಿಗಳು ಕಾದು ನಿಂತಿದ್ದರು.
ತಮಿಳುನಾಡಿನ ಮುಖ್ಯಮಂತ್ರಿ ಯಾದ ಬಳಿಕ ಜೋಸೆಫ್ ವಿಜಯ್ ಇಂದು ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದರು
- Advertisement -


