Friday, June 12, 2026
Homeಕರಾವಳಿಮಂಗಳೂರುವಿಟ್ಲ; ಅಕ್ರಮವಾಗಿ ಯೂರಿಯಾ ರಸಗೊಬ್ಬರ ಮಾರಾಟ: ಓರ್ವನ ಬಂಧನ

ವಿಟ್ಲ; ಅಕ್ರಮವಾಗಿ ಯೂರಿಯಾ ರಸಗೊಬ್ಬರ ಮಾರಾಟ: ಓರ್ವನ ಬಂಧನ

- Advertisement -
- Advertisement -

ವಿಟ್ಲ; ಅಕ್ರಮವಾಗಿ ಯೂರಿಯಾ ರಸಗೊಬ್ಬರ ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಬಂಧಿಸಲಾಗಿದೆ. ಮೊಹಮ್ಮದ್ ಅಶ್ರಫ್ ಬಂಧಿತ ಆರೋಪಿ.

ದಿನಾಂಕ: 11-06-2026ನೇ ಗುರುವಾರದಂದು ಸಂಜೆ, ಯೂರಿಯಾ ರಸಗೊಬ್ಬರವನ್ನು ಕಾನೂನುಬಾಹಿರವಾಗಿ ಮರುಪೊಟ್ಟಣಿಕರಿಸುತ್ತಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ, ವಿಟ್ಲ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗರವರು ಸಿಬ್ಬಂದಿಯೊಂದಿಗೆ ಬಂಟ್ವಾಳ ಕೊಳ್ನಾಡು ಬೊಳಂತೂರು ಎಂಬಲ್ಲಿಗೆ ತೆರಳಿ ಪರಿಶೀಲಿಸಿದಾಗ, ಆರೋಪಿ ಮೊಹಮ್ಮದ್ ಅಶ್ರಫ್ ತನ್ನ ಮನೆಯ ಬಳಿ, ಕೃಷಿ ಗ್ರೇಡ್ ನ ಯೂರಿಯಾ ರಸಗೊಬ್ಬರವನ್ನು ಕೈಗಾರಿಕೆ ಬಳಕೆಗೆ ತಾಂತ್ರಿಕ ಗ್ರೇಡ್ ನ ಚೀಲಗಳಿಗೆ ಮರುಪೊಟ್ಟಣಿಕರಿಸಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.  ಅಂದಾಜು ಒಟ್ಟು 632 ಚೀಲಗಳು ಮರುಪೊಟ್ಟಣಿಕರಿಸಿರುವುದಾಗಿದೆ. ಮುಂದಿನ ಕಾನೂನುಕ್ರಮಕ್ಕಾಗಿ ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರು ಕಛೇರಿಯ ಕೃಷಿ ಅಧಿಕಾರಿಗಳಾದ ನಂದನ ಶೆಣೈ ಪಿ, (ತಾಂತ್ರಿಕ)ರವರಿಗೆ ಮಾಹಿತಿ ನೀಡಲಾಗಿ ಅವರು  ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ  ಅಕ್ರ : 127/2026 ಕಲಂ: 3(2)(a), 3(2)(d), 3(2)(c), 3(2)(f)  ESSENTIAL COMMODITIES ACT, 1955 ಯಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Latest News

error: Content is protected !!