Wednesday, June 3, 2026
Homeಕರಾವಳಿಮಂಗಳೂರು-ಸೂರತ್ ವಿಶೇಷ ರೈಲು ಇನ್ನು ನಿರಂತರ

ಮಂಗಳೂರು-ಸೂರತ್ ವಿಶೇಷ ರೈಲು ಇನ್ನು ನಿರಂತರ

- Advertisement -
- Advertisement -

ಮಂಗಳೂರು- ಸೂರತ್ ನಡುವೆ ಸಂಚರಿಸುತ್ತಿದ್ದ ವಿಶೇಷ ರೈಲು ಇನ್ನು ಮುಂದೆ ವಾರದಲ್ಲಿ ಎರಡು ದಿನ ನಿರಂತರ ಸಂಚರಿಸಲಿದೆ. ಈ ಹಿಂದೆ ವಿಶೇಷ ರೈಲಾಗಿ (09057 / 09058) ಸಂಚರಿಸುತ್ತಿದ್ದ ಸೂರತ್ – ಮಂಗಳೂರು ಜಂಕ್ಷನ್ ರೈಲು, ಇನ್ನು ಮುಂದೆ ಕಾಯಂ ಆಗಿ ವಾರದಲ್ಲಿ ಎರಡು ದಿನ ನಿರಂತರವಾಗಿ ಸೇವೆ ಒದಗಿಸಲಿದೆ. ಜೂನ್ 3ರಿಂದ ಜಾರಿಗೆ ಬರುವಂತೆ ಈ ರೈಲು ಹೊಸ ಸಂಖ್ಯೆಗಳೊಂದಿಗೆ (19057 / 19058) ಮುನ್ನಡೆಯಲಿದೆ.

ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 19057 ಪ್ರತಿ ಬುಧವಾರ ಮತ್ತು ರವಿವಾರ ಸಂಜೆ 7.35ಕ್ಕೆ ಸೂರತ್‌ನಿಂದ ಹೊರಟು, ಮಾರನೆ ದಿನ ಸಂಜೆ 7.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಹಾಗೆಯೇ ಮರುಪ್ರಯಾಣದ ರೈಲು ಸಂಖ್ಯೆ 19058 ಪ್ರತಿ ಗುರುವಾರ ಮತ್ತು ಸೋಮವಾರ ರಾತ್ರಿ 10.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು, ಮಾರನೆ ದಿನ ರಾತ್ರಿ 11.45ಕ್ಕೆ ಸೂರತ್ ತಲುಪಲಿದೆ.

ಒಟ್ಟು 20 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 8 ಎಸಿ ಕೋಚ್‌ಗಳು, 6 ಸ್ಲೀಪರ್ ಕೋಚ್‌ಗಳು, 4 ಜನರಲ್ ಕೋಚ್‌ಗಳು ಹಾಗೂ 2 ಎಸ್ಎಲ್ ಆರ್ಡಿ ಕೋಚ್‌ಗಳನ್ನು ಅಳವಡಿಸಲಾಗಿದೆ. ಇನ್ನು ಕರಾವಳಿ ಮತ್ತು ಕೊಂಕಣ ರೈಲ್ವೆ ಮಾರ್ಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಈ ರೈಲು ಉದ್ಘಾ, ವಲ್ಸಾಡ್, ವಾಪಿ, ವಾಸೈ ರೋಡ್, ಪನ್ವೇಲ್, ರೋಹಾ, ಚಿಪ್ಳೂಣ್, ರತ್ನಾಗಿರಿ, ಸಿಂಧುದುರ್ಗ, ಸಾವಂತವಾಡಿ, ತಿವಿಂ, ಮಡ್‌ಗಾಂವ್‌, ಕಾರವಾರ, ಅಂಕೋಲಾ, ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಬೈಂದೂರು (ಮೂಕಾಂಬಿಕಾ ರೋಡ್), ಕುಂದಾಪುರ, ಉಡುಪಿ, ಮೂಲ್ಕಿ ಹಾಗೂ ಸುರತ್ಕಲ್ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

- Advertisement -

Latest News

error: Content is protected !!