- Advertisement -
![]()
- Advertisement -
ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಹುಲಿಯೊಂದು ಒಂದೇ ಸಮಯದಲ್ಲಿ ಭೀಕರ ದಾಳಿ ನಡೆಸಿ ನಾಲ್ವರು ಮಹಿಳೆಯರನ್ನು ಕೊಂದಿರುವ ಘಟನೆ ನಡೆದಿದೆ.
ತಡೋಬಾ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಸಿಂಧೇವಾಡಿ ತಾಲ್ಲೂಕಿನ ಗುಂಜೇವಾಹಿ ಪಾಪನ್ಪುರ್ ಅರಣ್ಯ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದ್ದು, ಗುಂಜೇವಾಹಿ ಗ್ರಾಮದ ಸುಮಾರು ಹತ್ತು ಮಹಿಳೆಯರು ಕಟ್ಟಿಗೆ ಸಂಗ್ರಹಿಸಲೆಂದು ಅರಣ್ಯಕ್ಕೆ ತೆರಳಿದ್ದಾಗ, ಅಲ್ಲಿನ ಪೊದೆಯಲ್ಲಿ ಅಡಗಿದ್ದ ಹುಲಿ ದಿಢೀರನೆ ಅವರ ಮೇಲೆ ದಾಳಿ ಮಾಡಿದೆ.
ಈ ಹಠಾತ್ ದಾಳಿಯಿಂದಾಗಿ ನಾಲ್ವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನು ಕೆಲವರು ಗಾಯಗೊಂಡಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
- Advertisement -


