- Advertisement -
![]()
- Advertisement -
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬಜಪೆ, ಕಟೀಲು ಮತ್ತು ಕಿನ್ನಿಗೋಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 67ರ ಮರವೂರಿನಲ್ಲಿ ₹40 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಸುಮಾರು 50 ವರ್ಷ ಹಳೆಯದಾದ ಹಾಲಿ ಸೇತುವೆಯು ಜರ್ಜರಿತಗೊಂಡು 2024ರಿಂದ ಸಂಪೂರ್ಣವಾಗಿ ಮುಚ್ಚಲ್ಪಟ್ಟ ಕಾರಣ, 2023ರಲ್ಲಿ ನಿರ್ಮಿಸಲಾದ ಪರ್ಯಾಯ ನಾಲ್ಕು ಪಥಗಳ ಸೇತುವೆಯಲ್ಲೇ ಸದ್ಯಕ್ಕೆ ದ್ವಿಮುಖ ಸಂಚಾರವನ್ನು ಕಲ್ಪಿಸಲಾಗಿದೆ. ಇದರಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿದ್ದು, ನಿತ್ಯ ಪ್ರಯಾಣಿಕರಿಗೆ ಮತ್ತು ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ತೀವ್ರ ಅನಾನುಕೂಲ ಹಾಗೂ ಅಪಘಾತದ ಭೀತಿ ಎದುರಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸುಮಾರು 200 ಮೀಟರ್ ಉದ್ದ ಹಾಗೂ 12 ಮೀಟರ್ ಅಗಲದ ಹೊಸ ಸೇತುವೆಯನ್ನು ಯೋಜಿಸಲಾಗಿದ್ದು, ಮುಂಗಾರು ಮಳೆಯ ನಂತರ ಇದರ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.
- Advertisement -


