- Advertisement -
![]()
- Advertisement -
ಮೂಲ್ಕಿ: ಕೊಳಚಿಕಂಬ್ಬ ಸುಖಾನಂದ ಶೆಟ್ಟಿ ಪಾರ್ಕ್ ಬಳಿ ಮಾದಕ ವಸ್ತು ಸೇವಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಕಾರ್ನಾಡು ಕೆಎಸ್ ರಾವ್ ನಗರದ ನಿವಾಸಿ ಮಹಮ್ಮದ್ ಅನ್ವರ್ (42) ಎಂದು ಗುರುತಿಸಲಾಗಿದೆ.
ಈತನು ಪೊಲೀಸರು ಕರ್ತವ್ಯದಲ್ಲಿದ್ದ ವೇಳೆ ಅಮಲಿನಲ್ಲಿರುವುದು ಗಮನಕ್ಕೆ ಬಂದಿದ್ದು, ವಿಚಾರಣೆ ನಡೆಸಿದಾಗ ಆತ ಎಂಡಿಎಂಎ ಹಾಗೂ ಗಾಂಜಾ ಸೇವಿಸಿರುವುದಾಗಿ ತಿಳಿಸಿದ್ದ. ನಂತರದಲ್ಲಿ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ಸಾಬೀತಾಗಿದ್ದು, ಪ್ರಕರಣ ದಾಖಲಾಗಿದೆ.
- Advertisement -


