Friday, June 5, 2026
HomeUncategorizedಮಂಗಳೂರು: ಕೌಂಪೌಂಡ್ ಗೋಡೆ ಹಾಗೂ ಮಣ್ಣು ಕುಸಿದು ಬಿದ್ದು ಹಿರಿಯ ಸಿವಿಲ್ ಕಂಟ್ರಾಕ್ಟರ್ ಸಾವು

ಮಂಗಳೂರು: ಕೌಂಪೌಂಡ್ ಗೋಡೆ ಹಾಗೂ ಮಣ್ಣು ಕುಸಿದು ಬಿದ್ದು ಹಿರಿಯ ಸಿವಿಲ್ ಕಂಟ್ರಾಕ್ಟರ್ ಸಾವು

- Advertisement -
- Advertisement -

ಮಂಗಳೂರು: ಕೌಂಪೌಂಡ್ ಗೋಡೆ ಹಾಗೂ ಮಣ್ಣು ಕುಸಿದು ಬಿದ್ದು ಹಿರಿಯ ಸಿವಿಲ್ ಕಂಟ್ರಾಕ್ಟರ್ ಸಾವನ್ನಪ್ಪಿರುವ ಘಟನೆ

ಕುಂಟಿಕಾನ ಬಳಿಯ ಲೋಹಿತ್ ನಗರದಲ್ಲಿ ಮೇ 21ರಂದು ಗುರುವಾರ ನಡೆದಿದೆ ನಡೆದಿದೆ. ಅಶೋಕನಗರ ನಿವಾಸಿ ಆಂಟನಿ ಮಸ್ಕರೇನಸ್ (65) ಮೃತ ದುರ್ದೈವಿ.

ಆಂಟನಿ ಮಸ್ಕರೇನಸ್ ಅವರು ಕುಂಟಿಕಾನದ ಲೋಹಿತ್ ನಗರದಲ್ಲಿ ಮನೆಯೊಂದರ ಹಿಂಭಾಗದ ಆವರಣ ಗೋಡೆ ನಿರ್ಮಾಣದ ಗುತ್ತಿಗೆಯನ್ನು ವಹಿಸಿಕೊಂಡಿದ್ದರು. ಈಗಾಗಲೇ ಒಂದಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದವು. ಗುರುವಾರದಂದು ಅವರು ಎಂದಿನಂತೆ ಕಾರ್ಮಿಕರ ಜೊತೆ ನಿಂತು ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಾ, ಗೋಡೆಯ ಅಳತೆ ಕಾರ್ಯದಲ್ಲಿ ತೊಡಗಿದ್ದರು.ಈ ವೇಳೆ ತಡೆಗೋಡೆಯ ಮಣ್ಣು ಹಾಗೂ ಗೋಡೆ ಏಕಾಏಕಿ ಇವರ ಮೇಲೆಯೇ ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ಆಂಟನಿ ಅವರು ಸಂಪೂರ್ಣವಾಗಿ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.


ತಕ್ಷಣವೇ ಅಲ್ಲಿದ್ದ ಕಾರ್ಮಿಕರು ಹಾಗೂ ಸ್ಥಳೀಯರು ಧಾವಿಸಿ ತೀವ್ರ ಕಾರ್ಯಾಚರಣೆ ನಡೆಸಿ ಆಂಟನಿ ಅವರನ್ನು ಮಣ್ಣಿನಡಿಯಿಂದ ಮೇಲೆತ್ತಿದ್ದಾರೆ. ತಕ್ಷಣವೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕಾವೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!