Sunday, June 7, 2026
Homeಕರಾವಳಿಮಂಗಳೂರುಬೆಳ್ತಂಗಡಿ : “ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಿ : ಡಾ| ಗೋಪಾಲ ಕೃಷ್ಣ ಕೆ.

ಬೆಳ್ತಂಗಡಿ : “ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಿ : ಡಾ| ಗೋಪಾಲ ಕೃಷ್ಣ ಕೆ.

- Advertisement -
- Advertisement -

ಬೆಳ್ತಂಗಡಿ : “ಸೇವಾಭಾವನೆ, ಮಾನವೀಯತೆ ಹಾಗೂ ಜನರ ಆರೋಗ್ಯದ ಕಡೆಗಿನ ಸಮರ್ಪಣೆ ಎಲ್ಲರಿಗೂ ಪ್ರೇರಣೆಯಾಗಿದೆ. ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಿ” ಎಂದು ಉಜಿರೆ ಬೆನಕ ಹೆಲ್ತ್ ಸೆಂಟರ್‌ನ ಆಡಳಿತ ನಿರ್ದೇಶಕ ಡಾ| ಗೋಪಾಲ ಕೃಷ್ಣ ಕೆ. ನುಡಿದರು.

ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಸುವರ್ಣ ಮಹೋತ್ಸವ ಸಮಿತಿ, ಜಯನಗರ-ಗುರಿಪಳ್ಳ ಇವರ ಪ್ರಾಯೋಜಕತ್ವದಲ್ಲಿ ಬೆನಕ ಹೆಲ್ತ್ ಸೆಂಟರ್, ಉಜಿರೆ – ಬೆನಕ ಚಾರಿಟೇಬಲ್ ಟ್ರಸ್ಟ್ ಉಜಿರೆ, ಆಳ್ವಾಸ್ ಹೆಲ್ತ್ ಸೆಂಟರ್, ಮೂಡಬಿದಿರೆ, ರೋಟರಿ ಕ್ಲಬ್ ಬೆಳ್ತಂಗಡಿ ಇವರ ಸಹಭಾಗಿತ್ವದೊಂದಿಗೆ 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾದ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರದಲ್ಲಿ ಒಟ್ಟು 152 ಮಂದಿ ಉಚಿತ ಆರೋಗ್ಯ ತಪಾಸಣೆಗೊಳಪಟ್ಟಿದ್ದಾರೆ.ಮತ್ತು 84 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ದೇವರ ಕಿರೀಟಕ್ಕೆ ಚಿನ್ನದ ಸತ್ತಿಗೆ ಅರ್ಪಿಸುವ ನೂತನ ಕಾರ್ಯಕ್ರಮದ ಕೂಪನ್‌ನ್ನು ವಿಧ್ಯುಕ್ತವಾಗಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸದಾನಂದ ಪೂಜಾರಿ, ಕೋಡ್ಕಲ್, ಅಧ್ಯಕ್ಷರು, ಸುವರ್ಣ ಮಹೋತ್ಸವ ಸಮಿತಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ರೋ/ ಶ್ರೀಧರ್ ಕೆ.ಪಿ., ನಿಯೋಜಿತ ಅಧ್ಯಕ್ಷರು, ರೋಟರಿ ಕ್ಲಬ್ ಬೆಳ್ತಂಗಡಿ, ಡಾ ವಿಶ್ವ ವಿಜೇತ್ MBBS, DLO, DNB (ENT Surgeon), ವೆನ್ಲಾಕ್ಆಸ್ಪತ್ರೆ, ಮಂಗಳೂರು, ಡಾ ಗಣೇಶ್ ಪ್ರಸಾದ್, Asst. Prof. & Medical Officer,SDM YOGA & NATURE CURE HOSPITAL, ಡಾ ಆದರ್ಶ್ ಕೆ.ಯಸ್,MDS , ಶ್ರೀ ಪ್ರಕಾಶ್ ಫೆರ್ನಾಂಡಿಸ್ ಎಸ್ .ಎ ಮೆಡಿಕಲ್ ಉಜಿರೆ ಇವರುಗಳು ಉಪಸ್ಥಿತ ರಿದ್ದರು.

ಶಿಬಿರದಲ್ಲಿ ಸಾಮಾನ್ಯ ಹಾಗೂ ತುರ್ತು ಚಿಕಿತ್ಸಾ ತಜ್ಞರು – ಡಾ ಆದಿತ್ಯ ರಾವ್, MBBS, DNB, (ಫಿಸಿಶಿಯನ್) , ಸ್ತ್ರೀರೋಗ, ಪ್ರಸೂತಿ ಮತ್ತು ಕೀರಂದ್ರ ಶಸ್ತ್ರ ಚಿಕಿತ್ಸಾ ತಜ್ಞರು-ಡಾ ಅಂಕಿತ್ ಜಿ. ಭಟ್,MBBS, MS (OBG), DNB (OBG), FMAS, ಎಲುಬು – ಕೀಲು ತಜ್ಞರು, ಹ್ಯಾಂಡ್ & ಮೈಕ್ರೋಸರ್ಜನ್ – ಡಾ ರೋಹಿತ್ ಜಿ. ಭಟ್,MBBS, MS (Ortho), ಸ್ತ್ರೀರೋಗ, ಪ್ರಸೂತಿ ಮತ್ತು IVF ತಜ್ಞರು- ಡಾ ನವ್ಯ ಭಟ್,MBBS, MS(OBG), DNB(OBG), FRM ಹಾಗೂ ಮಕ್ಕಳ ತಜ್ಞರು- ಡಾ ಶಂತನು ಪ್ರಭು ,MBBS, DCH, ಮತ್ತು Dr ಅರುಣ್ ಪ್ಯಾಥೋಲಾಜಿಸ್ಟ್, ಬಿ.ಉಮೇಶ ಗೌಡ ಆಳ್ವಾಸ್ ಹೆಲ್ತ್ ಕೇರ್ ಸೇರಿದಂತೆ ವಿವಿಧ ತಜ್ಞ ವೈದ್ಯರು ಪಾಲ್ಗೊಂಡು ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಿದರು.

ಕಾರ್ಯಕ್ರಮದ ಯಶಸ್ವಿಗಾಗಿ ರಮಾನಂದ ಶರ್ಮ,
ಪ್ರಕಾಶ್ ಕುಮಾರ್, ರಾಧಾಕೃಷ್ಣ ಶರ್ಮ,ಸಂತೋಷ್ ಗೋಳಿದೊಟ್ಟು, ಚೇತನ್ ಶೆಟ್ಟಿ ಗುರಿಪಳ್ಳ, ಶಿವಪ್ರಸಾದ್ ಕೆರಿಮಾರ್, ಬಾಲಕೃಷ್ಣ ಗೌಡ , ಭರತ ಕುಮಾರ್, , ಮುಂತಾದವರು ಶ್ರಮಿಸಿದರು.

ಗುರುರಾಜ ಪೂಜಾರಿ ಗುರಿಪಳ್ಳ ಸ್ವಾಗತಿಸಿ, ನವೀನ್ ಶೆಟ್ಟಿ ಗುತ್ತಿಲಾರಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.

- Advertisement -

Latest News

error: Content is protected !!