- Advertisement -
![]()
- Advertisement -
ಮಂಗಳೂರು: ಮಂಗಳೂರಿನಲ್ಲಿ ಮಿಂಚು ಮತ್ತು ಗುಡುಗು ಸಹಿತ ಸುರಿದ ಭಾರೀ ಮಳೆಯಿಂದಾಗಿ ಕೆಲವು ಹೊತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್ ಗೆ ಸಮಸ್ಯೆ ಉಂಟಾಗಿತ್ತು.
ಪ್ರತಿಕೂಲ ಹವಾಮಾನದಿಂದಾಗಿ ಬೆಂಗಳೂರಿನಿಂದ ಬಂದಿದ್ದ ಎರಡು ವಿಮಾನಗಳು ಮಂಗಳೂರಿನಲ್ಲಿ ಸುರಕ್ಷಿತ ಲ್ಯಾಂಡಿಂಗ್ ಗೆ ಸಮಸ್ಯೆ ಉಂಟಾಗಿತ್ತು. ಹೀಗಾಗಿ
ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಕೆಲವು ಹೊತ್ತು ಎರಡು ವಿಮಾನಗಳು ಕೆಳ ಮಟ್ಟದಲ್ಲಿ ಹಾರಾಟ ನಡೆಸುವಂತಾಗಿತ್ತು.
ವಿಟ್ಲದಲ್ಲಿ ಸ್ವಲ್ಪ ಸಮಯದ ಹಾರಾಟದ ಬಳಿಕ ಎರಡೂ ವಿಮಾನಗಳು ಮಂಗಳೂರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿವೆ.
.
ಇದೇ ವೇಳೆ ಭಾರೀ ಮಳೆ ಸುರಿದ ಪರಿಣಾಮ ಮಂಗಳೂರು ನಗರದ ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿತ್ತು.
- Advertisement -


