- Advertisement -
![]()
- Advertisement -
ನವದೆಹಲಿ: ದೇಶದಲ್ಲಿ ಮಿತ ವ್ಯಯದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆಯ ಬೆನ್ನಲ್ಲೇ ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವರ ಬೆಂಗಾವಲು ವಾಹನಗಳ ಸಂಖ್ಯೆಯಲ್ಲಿ ಕಡಿತಗೊಂಡಿದೆ.
ಭದ್ರತೆಗೆ ಧಕ್ಕೆಯಾಗದಂತೆ ಪ್ರಧಾನಿ ನರೇಂದ್ರ ಮೋದಿ ಶೇಕಡಾ 50 ರಷ್ಟು ಬೆಂಗಾವಲು ವಾಹನಗಳಲ್ಲಿ ಕಡಿತ ಮಾಡಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಗಾವಲು ವಾಹನಗಳ ಪೈಕಿ ಮೂರು ವಾಹನಗಳನ್ನು ಹೊರತು ಪಡಿಸಿ ಉಳಿದ ವಾಹನಗಳನ್ನು ಕಡಿತ ಮಾಡಲಾಗಿದೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಸಚಿವರ ವಾಹನಗಳ ಬಳಕೆಯಲ್ಲಿ ಮಿತವ್ಯಯಕ್ಕೆ ಮುಂದಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಮುಂದಾಗಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ವಾರದಲ್ಲಿ ಮೂರು ದಿನಗಳ ಕಾಲ ಬೆಂಗಾವಲು ವಾಹನ ಬಳಸದೇ ಇರಲು ತೀರ್ಮಾನಿಸಿದ್ದಾರೆ.
- Advertisement -


