Friday, June 5, 2026
Homeಕರಾವಳಿಉಡುಪಿಕಾರ್ಕಳ: ಬಾವಿಯ ಮಣ್ಣು ತೆಗೆಯಲು ಹೋಗಿ ಅಪಾಯಕ್ಕೆ ಸಿಲುಕಿದವರ ರಕ್ಷಣೆ

ಕಾರ್ಕಳ: ಬಾವಿಯ ಮಣ್ಣು ತೆಗೆಯಲು ಹೋಗಿ ಅಪಾಯಕ್ಕೆ ಸಿಲುಕಿದವರ ರಕ್ಷಣೆ

- Advertisement -
- Advertisement -

ಕಾರ್ಕಳ: ಬಾವಿಯ ಮಣ್ಣು ತೆಗೆಯಲು ಹೋಗಿ ಅಪಾಯಕ್ಕೆ ಸಿಲುಕಿದವರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕುಕ್ಕುಂದೂರು ಅಶ್ವಥಪುರದಲ್ಲಿ ನಡೆದಿದೆ. ರಾಜೇಶ್‌ (42), ಪವನ್‌ (29) ಹಾಗೂ ಗೋಪಾಲ್‌ ನಾಯ್ಕ್‌ (52) ರಕ್ಷಿಸಲ್ಪಟ್ಟವರು.


ಬಾವಿಯ ಮಣ್ಣು ತೆಗೆಯಲೆಂದು ಇಳಿದಿದ್ದ ರಾಜೇಶ್ ಅವರು ಮೇಲಕ್ಕೆ ಬರುವಾಗ ಅಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದರು. ಅವರನ್ನು ರಕ್ಷಿಸಲು ಮುಂದಾದ ಪವನ್ ಮತ್ತು ಗೋಪಾಲ್ ನಾಯ್ಕ್ ಕೂಡ ಬಾವಿಯಿಂದ ಮೇಲೆ ಬರಲಾಗದೆ ಒಳಗೆ ಸಿಲುಕಿಕೊಂಡಿದ್ದರು. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಕಾರ್ಕಳ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್ ನೇತೃತ್ವದ ತಂಡ, ಹರಸಾಹಸ ಪಟ್ಟು ಮೂವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಗಾಯಗೊಂಡ ರಾಜೇಶ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗ್ನಿಶಾಮಕ ದಳದ ಈ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!