Wednesday, June 24, 2026
Homeಕರಾವಳಿ34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ; ದಸ್ತಗಿರಿ ಮಾಡಿದ ವಿಟ್ಲ ಠಾಣಾ ಪೊಲೀಸರು

34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ; ದಸ್ತಗಿರಿ ಮಾಡಿದ ವಿಟ್ಲ ಠಾಣಾ ಪೊಲೀಸರು

- Advertisement -
- Advertisement -

ವಿಟ್ಲ: ಕಾಸರಗೋಡು ಮಂಜೇಶ್ವರ ನಿವಾಸಿ ಇಬ್ರಾಹಿಂ (28) ಹಾಗೂ ಸಿದ್ದೀಕ್ ಎಂಬವರು ದಿನಾಂಕ:14.10.1992 ರಂದು ಕಾರೊಂದರಲ್ಲಿ ಅಕ್ರಮವಾಗಿ ಪೆಟ್ರೋಲ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ದ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅಕ್ರ: 124/1992 ಕಲಂ:3 ಮತ್ತು ಕಲಂ: 23 ಪೆಟ್ರೋಲಿಯಂ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಸದ್ರಿ ಆರೋಪಿಗಳ ಪೈಕಿ ಸಿದ್ದೀಕ್ ಎಂಬಾತನು ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ. ಈತನನ್ನು ದಿನಾಂಕ: 11.05.2026 ರಂದು ರಾತ್ರಿ, ವಿಟ್ಲ ಠಾಣಾ ಪ್ರೊಬೇಶನರ್ ಪಿಎಸ್ಐ ಸಿದ್ದಪ್ಪ , ಎಎಸ್ಐ1 ಜಯರಾಮ್ , ಪಿಸಿ 2465 ಗೋಪಾಲ್ , ಪಿಸಿ 2355 ಯಂಕಪ್ಪ , ಪಿಸಿ 2505 ಶ್ರೀಶೈಲ್ ಜೋರಾಪುರ ರವರುಗಳ ತಂಡ ಕನ್ಯಾನ ಗ್ರಾಮದ ಕಬ್ಬಿನ ಮೂಲೆ ಎಂಬಲ್ಲಿ ದಸ್ತಗಿರಿ ಮಾಡಿದ್ದು ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

- Advertisement -

Latest News

error: Content is protected !!