Friday, June 5, 2026
Homeತಾಜಾ ಸುದ್ದಿಬೆಳಗಾವಿ : ಪ್ರಿಯಕರನ ಜೊತೆ ಓಡಿಹೋಗಲು ಪತಿಯ ಮನೆಯಲ್ಲೇ ಬರೋಬ್ಬರಿ 21 ಲಕ್ಷ ರೂಪಾಯಿ ಮೌಲ್ಯದ...

ಬೆಳಗಾವಿ : ಪ್ರಿಯಕರನ ಜೊತೆ ಓಡಿಹೋಗಲು ಪತಿಯ ಮನೆಯಲ್ಲೇ ಬರೋಬ್ಬರಿ 21 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ನವವಿವಾಹಿತೆ ಹಾಗೂ ಪ್ರೇಮಿಯ ಬಂಧನ

- Advertisement -
- Advertisement -

ಬೆಳಗಾವಿ : ಪ್ರಿಯಕರನ ಜೊತೆ ಓಡಿಹೋಗಲು ಪತಿಯ ಮನೆಯಲ್ಲೇ ಬರೋಬ್ಬರಿ 21 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ನವವಿವಾಹಿತೆ ಹಾಗೂ ಆಕೆಯ ಪ್ರೇಮಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.. ಹಸೀನಾ ನದಾಫ್ ಮತ್ತು ಈಕೆಯ ಪ್ರಿಯಕರ ಹಣಮಂತ ಮಾರಾಪೂರ ಬಂಧಿತ ಆರೋಪಿಗಳು.


ಹೊಸಕೋಟಿ ಗ್ರಾಮದ ಶರೀಫ್ ಎಂಬುವವರನ್ನು ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ಹಸೀನಾ, ಮದುವೆಯ ನಂತರವೂ ಪ್ರಿಯಕರ ಹಣಮಂತನ ಜೊತೆ ಸಂಪರ್ಕದಲ್ಲಿದ್ದಳು. ಪ್ರಿಯಕರನ ಜೊತೆ ಸೇರಿ ಜೀವನ ನಡೆಸಲು ಪ್ಲ್ಯಾನ್ ಮಾಡಿದ  ಈಕೆ, ಪತಿಯ ಮನೆಯಲ್ಲಿದ್ದ 154.6 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳಿಗೆ ಕನ್ನ ಹಾಕಿದ್ದಾಳೆ. ಕಳ್ಳತನದ ಬಗ್ಗೆ ದಿಲ್ಶಾನ್ ನದಾಫ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ನೇತೃತ್ವದ ತಂಡ, ಕೇವಲ 48 ಗಂಟೆಗಳಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ಪೊಲೀಸರ ಈ ಶೀಘ್ರ ಕಾರ್ಯಾಚರಣೆಗೆ ಎಸ್ಪಿ ಕೆ. ರಾಮರಾಜನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಂಧಿತರಿಂದ ಕಳವು ಮಾಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಟಕೋಳ ಪೊಲೀಸರು ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

- Advertisement -

Latest News

error: Content is protected !!