Saturday, June 6, 2026
Homeಕರಾವಳಿಮಂಗಳೂರುಪುತ್ತೂರು : ಕಲಾವಿದರ ಬಗ್ಗೆ ಅವಹೇಳನಕಾರಿ ಹೇಳಿಕೆ; ತಿಮರೋಡಿ ಸೇರಿ ನಾಲ್ಕು ಜನರ ವಿರುದ್ಧ ಪ್ರಕರಣ...

ಪುತ್ತೂರು : ಕಲಾವಿದರ ಬಗ್ಗೆ ಅವಹೇಳನಕಾರಿ ಹೇಳಿಕೆ; ತಿಮರೋಡಿ ಸೇರಿ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಪುತ್ತೂರು : ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕರೆ ಮಾಡಿ ಕಲಾವಿದರಿಗೆ ಅವಹೇಳನಕಾರಿ ಮಾತಾನಾಡಿರುವವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಪ್ರಿಲ್ 21 ರಂದು ಸತೀಶ್ ಕುಮಾರ್ ರೈ ಪಡುಮಲೆ ಕಲಾವಿದ ಸುಂದರ್ ರೈ ಮಂದರ ಅವರಿಗೆ ಕರೆ ಮಾಡಿ ತಿಮರೋಡಿ ವಿರುದ್ಧ ನೀಡಿದ ಕೇಸ್ ವಿಚಾರದಲ್ಲಿ ಹೆದರಿಸಿ ಬೆದರಿಕೆ ಹಾಕಿ ಮುಂಬಯಿಯಲ್ಲಿ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕಲಾವಿದರ ಬಗ್ಗೆ  ಎಪ್ರಿಲ್ 29 ರಂದು ಕೆಟ್ಟದಾಗಿ ಬರೆದು ಪ್ರಸಾರ ಮಾಡಲಾಗಿದೆ ಅದಲ್ಲದೆ ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸನ್ನ ರವಿ ಮತ್ತು ಇತರರು ಈ ರೀತಿಯ ಪ್ರಯತ್ನ ಮಾಡಿರುತ್ತಾರೆ.ತಿಮರೋಡಿ ವಿರುದ್ಧ ನೀಡಿದ ಪ್ರಕರಣವನ್ನು ವಾಪಸ್ ಪಡೆದು, ತಿಮರೋಡಿ ಪರವಾಗಿ ಸುಳ್ಳು ಸಾಕ್ಷಿ ನೀಡುವಂತೆ ಒತ್ತಡ ಹಾಕಿದ್ದಾರೆ ಎಂದು ಕಲಾವಿದ ಸುಂದರ್ ರೈ ಮಂದರ ಮೇ.7 ರಂದು ದೂರು ನೀಡಿದ್ದಾರೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೇ.7 ರಂದು ರಾತ್ರಿ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ, ಸತೀಶ್ ಕುಮಾರ್ ರೈ ಪಡುಮಲೆ, ಕುಡ್ಲ ರಾಂಪೇಜ್ ಯೂಟ್ಯೂಬ್, ಪ್ರಸನ್ನ ರವಿ ಹಾಗೂ ಇತರರ ವಿರುದ್ಧ BNS-2023 (u/s-351(2),232)) ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!