Monday, June 8, 2026
Homeಕರಾವಳಿಉಡುಪಿಕಾರ್ಕಳ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ;ಅಣ್ಣನನ್ನು ಮರದ ತುಂಡಿನಿಂದ ಹೊಡೆದು ಕೊಂದ ತಮ್ಮ

ಕಾರ್ಕಳ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ;ಅಣ್ಣನನ್ನು ಮರದ ತುಂಡಿನಿಂದ ಹೊಡೆದು ಕೊಂದ ತಮ್ಮ

- Advertisement -
- Advertisement -

ಕಾರ್ಕಳ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಉಂಟಾಗಿ ಅಣ್ಣನನ್ನು ಮರದ ತುಂಡಿನಿಂದ ಹೊಡೆದು ತಮ್ಮ ಕೊಂದ ಘಟನೆ ಕಾರ್ಕಳ ತಾಲೂಕಿನ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿ ನಡೆದಿದೆ. ರಿಚರ್ಡ್ ಡಿಸೋಜ (65) ಕೊಲೆಯಾದವರು. ಇವರು ಮತ್ತು ಇವರ ತಮ್ಮ ಹೆರಾಲ್ಡ್ ಡಿಸೋಜ ಅವರು ಹಿರಿಯಂಗಡಿಯಲ್ಲಿ ವಾಸವಾಗಿದ್ದು, ತಾವು ವಾಸವಿದ್ದ ಮನೆ ಹಾಗೂ ಜಾಗದ ಬಗ್ಗೆ ಇಬ್ಬರ ಮಧ್ಯೆ ದೀರ್ಘಕಾಲದ ತಕರಾರು ಇತ್ತು. ಮೇ 2 ರಂದು ಸಂಜೆ 6 ಗಂಟೆ ಸುಮಾರಿಗೆ ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಹೆರಾಲ್ಡ್ ಡಿಸೋಜ, ಮರದ ರೀಪಿನಿಂದ ಅಣ್ಣ ರಿಚರ್ಡ್‌ಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಮೃತರ ಪತ್ನಿ ಜೆಸಿಂತಾ ಡಿಸೋಜ ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹೆರಾಲ್ಡ್ ಡಿಸೋಜನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

- Advertisement -

Latest News

error: Content is protected !!