- Advertisement -
![]()
- Advertisement -
ಕಡಬ: ಬಾಡಿಗೆ ರೂಂನಲ್ಲಿ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ನೂಜಿಬಾಳ್ತಿಲದಲ್ಲಿ ನಡೆದಿದೆ. ಕಡಬ ಕೊಣಾಜೆ ನಿವಾಸಿ ಚೆನ್ನಪ್ಪ ಪೂಜಾರಿ (60) ಮೃತರು.
ಈ ಬಗ್ಗೆ ಚೆನ್ನಪ್ಪ ಪೂಜಾರಿ ಅವರ ಪುತ್ರ ರವಿಚಂದ್ರ ಬಿ ದೂರು ನೀಡಿದ್ದು ನನ್ನ ತಂದೆ ನೂಜಿಬಾಳ್ತಿಲದಲ್ಲಿ ಬಾಡಿಗೆ ರೂಮ್ ನಲ್ಲಿ ವಾಸವಿದ್ದು, ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದರು. ದಿನಾಂಕ01/05/2026 ರಂದು ತಂದೆಯವರು ವಾಸವಿದ್ದ ಕಟ್ಟಡದ ಮಾಲೀಕರು ರವಿಚಂದ್ರ ಅವರಿಗೆ ಕರೆ ಮಾಡಿ ನಿಮ್ಮ ತಂದೆಯವರು ಬಾಡಿಗೆ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
- Advertisement -


