ಮಂಗಳೂರು; ತಲ್ವಾರ್ ನಿಂದ ದಾಳಿಗೆ ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕಳವಾರು ಎಂಬಲ್ಲಿ ನಡೆದಿದೆ. ಮೂಲತಃ ವಾಮಂಜೂರು ನಿವಾಸಿ ನವೀನ್ ಹಲ್ಲೆಗೆ ಮುಂದಾದ ಆರೋಪಿ. ನವೀನ್ ಕೆಲವು ತಿಂಗಳಿಂದ ವಿಚ್ಛೇದನ ಪಡೆದು ಪತ್ನಿಯಿಂದ ದೂರವಾಗಿ ಜೋಕಟ್ಟೆಯಲ್ಲಿ ವಾಸವಾಗಿದ್ದ. ಆರೋಪಿ ನವೀನ್ ಶುಕ್ರವಾರ ರಾತ್ರಿ, ತಲವಾರ್ ಹಿಡಿದುಕೊಂಡು ಕಳವಾರು ನಿವಾಸಿ ದೇವಿ ಪ್ರಸಾದ್ ಅವರ ಮೇಲೆ ದಾಳಿ ಮಾಡಲು ಹೋಗಿದ್ದಾನೆ. ಈ ವೇಳೆ ದೇವಿಪ್ರಸಾದ್ ಹಾಗೂ ಅವರ ಪೋಷಕರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ತಕ್ಷಣ ದೇವಿಪ್ರಸಾದ್ 112ಕ್ಕೆ ಕರೆ ಮಾಡಿದ್ದಾರೆ. ಆಗ ಪರಾರಿಯಾಗುವ ವೇಳೆ ನವೀನ್ ಬೈಕ್‌ನಿಂದ ಬಿದ್ದಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ನವೀನ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ದೇವಿಪ್ರಸಾದ್ ಅವರ ದೂರಿನ ಆಧಾರದ ಮೇಲೆ 307 ಮತ್ತು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಠಾಣೆಯಲ್ಲಿ ಇರಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.


