Thursday, June 4, 2026
Homeಕರಾವಳಿಮಂಗಳೂರುಪುತ್ತೂರು; ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿ ಬಾಲಕ ಸಾವು

ಪುತ್ತೂರು; ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿ ಬಾಲಕ ಸಾವು

- Advertisement -
- Advertisement -

ಪುತ್ತೂರು;; ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿ ಬಾಲಕ ಸಾವನ್ನಪ್ಪಿರುವ ಘಟನೆ ಪುತ್ತೂರಿನ ಗಡಿಯಾರ ಎಂಬಲ್ಲಿ ನಡೆದಿದೆ. ನೇರಳಕಟ್ಟೆ ಸಮೀಪದ ಗಣೇಶ ನಗರದ ಪ್ಲಾಟ್ ನಲ್ಲಿ ಬಾಡಿಗೆ ಮನೆಯಲ್ಲಿರುವ ಶರೀಫ್ ಅವರ ಪುತ್ರ ಶಹೀರ್ (15) ಮೃತ ಬಾಲಕ.

ಶಹೀರ್ ಶಾಲೆಗೆ ರಜೆಯಾಗಿದ್ದರಿಂದ ಗಡಿಯಾರದಲ್ಲಿರುವ ಅಜ್ಜನ ಮನೆಗೆ ಆಗಮಿಸಿದ್ದ. ಇಂದು ಬೆಳಿಗ್ಗೆ ಶಹೀರ್ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ. ಈತ ಪುತ್ತೂರು ಮೌಂಟೇನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Latest News

error: Content is protected !!