- Advertisement -
![]()
- Advertisement -
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸುಸ್ಥಿರತೆಯ ಹಾದಿಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ತಲುಪಿದ್ದು, ಪರಿಸರ ಸ್ನೇಹಿ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಹಿನ್ನೆಲೆಯಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟವು (CII) ಈ ನಿಲ್ದಾಣಕ್ಕೆ ಅತ್ಯುನ್ನತ ‘ಜೀರೋ ವೇಸ್ಟ್ ಟು ಲ್ಯಾಂಡ್‌ಫಿಲ್’ ಪ್ರಮಾಣಪತ್ರವನ್ನು ನೀಡಿ ಗೌರವಿಸಿದೆ.
ಇನ್ನು ನಿಲ್ದಾಣದಲ್ಲಿ ಉತ್ಪತ್ತಿಯಾಗುವ ಒಟ್ಟು ತ್ಯಾಜ್ಯದಲ್ಲಿ ಶೇಕಡಾ 99ಕ್ಕಿಂತ ಹೆಚ್ಚು ಭಾಗವನ್ನು ಭೂಭರ್ತಿ ಘಟಕಗಳಿಗೆ ಕಳುಹಿಸುವ ಬದಲು ಯಶಸ್ವಿಯಾಗಿ ಮರುಬಳಕೆ ಅಥವಾ ಮರುಸಂಸ್ಕರಣೆ ಮಾಡಲಾಗುತ್ತಿದೆ.
ಈ ಮಾನ್ಯತೆಯ ಮೂಲಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಅತ್ಯಂತ ಸ್ವಚ್ಛ ಮತ್ತು ಪರಿಸರ ಸ್ನೇಹಿ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನವನ್ನು ಪಡೆದುಕೊಂಡಿದೆ.
- Advertisement -


