Sunday, June 7, 2026
Homeಕರಾವಳಿಮಂಗಳೂರುಬೆಳ್ತಂಗಡಿ;  ನಿಷೇಧಿತ ಮಾದಕವಸ್ತು ಮಾರಾಟ ಯತ್ನ ಪ್ರಕರಣ; ಆರೋಪಿಗೆ ಶಿಕ್ಷೆ ಪ್ರಕಟ

ಬೆಳ್ತಂಗಡಿ;  ನಿಷೇಧಿತ ಮಾದಕವಸ್ತು ಮಾರಾಟ ಯತ್ನ ಪ್ರಕರಣ; ಆರೋಪಿಗೆ ಶಿಕ್ಷೆ ಪ್ರಕಟ

- Advertisement -
- Advertisement -

ಬೆಳ್ತಂಗಡಿ;  ನಿಷೇಧಿತ ಮಾದಕವಸ್ತು ಮಾರಾಟ ಯತ್ನ ಪ್ರಕರಣದ ಆರೋಪಿಗೆ ಜಿಲ್ಲಾ ವಿಶೇಷ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದೆ. ಬೆಳ್ತಂಗಡಿ ಚಾರ್ಮಾಡಿ ನಿವಾಸಿ ಟಿ.ಇ ಜೋಸೆಫ್ (42) ಶಿಕ್ಷೆಗೆ ಗುರಿಯಾದ ಅಪರಾಧಿ.

ದಿನಾಂಕ:8/3/2009 ರಂದು ಬೆಳ್ತಂಗಡಿ ಉಜಿರೆ ರಥಬೀದಿ ಎಂಬಲ್ಲಿ, ಅಂದಾಜು 50,000/- ರೂ ಬೆಲೆಬಾಳುವ 1.500 ಕಿ.ಗ್ರಾಂ ತೂಕದ ನಿಷೇಧಿತ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ, ಬೆಳ್ತಂಗಡಿ ಠಾಣಾ  ಅ.ಕ್ರ 60/09, ಕಲಂ: 8(ಸಿ) ಜೊತೆಗೆ 20(ಬಿ) ಎನ್.ಡಿ.ಪಿ.ಎಸ್. ಕಾಯಿದೆ ಯಂತೆ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ವಿಶೇಷ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಇದರ ನ್ಯಾಯಾಧೀಶರಾದ ಬಸವರಾಜ್  ರವರು ದಿನಾಂಕ 10/04/2026 ರಂದು ಟಿ.ಇ ಜೋಸೆಫ್ (42) ರವರನ್ನು ದೋಷಿ ಎಂದು ಪರಿಗಣಿಸಿ, ದಿನಾಂಕ 16/04/26 ರಂದು   NDPS ಕಾಯ್ದೆಯ ಸೆಕ್ಷನ್ 8(c) r/w ಸೆಕ್ಷನ್ 20(b)(ii)(B) ಅಡಿಯಲ್ಲಿ  5 ವರ್ಷಗಳ ಅವಧಿಗೆ ಕಠಿಣ ಜೈಲು ಶಿಕ್ಷೆ ಮತ್ತು ರೂ. 50,000/- ದಂಡವನ್ನು. ದಂಡವನ್ನು ಪಾವತಿಸಲು ವಿಫಲವಾದರೆ, ಅವರು 2 ತಿಂಗಳುಗಳ ಕಾಲ ಕಠಿಣ ಜೈಲು ಶಿಕ್ಷೆಗೆ ಆದೇಶಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದ ತನಿಖಾಧಿಕಾರಿಗಳಾಗಿದ್ದ ಬೆಳ್ತಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರಾಗಿದ್ದ ಬಿ.ಜಿ ಸುಬ್ಬಾಪುರ್ ಮಠ್ ರವರು ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ಮಾನ್ಯ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದು, ಸರ್ಕಾರಿ ಅಭಿಯೋಜಕರಾಧ ಶ್ರೀಮತಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಸ್ತಾ ರವರು ಸಮರ್ಥವಾಗಿ ವಾದ ಮಂಡಿಸಿರುತ್ತಾರೆ

- Advertisement -

Latest News

error: Content is protected !!