Saturday, June 6, 2026
Homeಚಿಕ್ಕಮಗಳೂರುರಾಯಚೂರು: ಬೊಲೆರೋ ಗೂಡ್ಸ್ ವಾಹನಕ್ಕೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ; ಮಂತ್ರಾಲಯಕ್ಕೆ ತೆರಳುತ್ತಿದ್ದ ಚಿಕ್ಕಮಗಳೂರು ಹಾಗೂ ಹಾಸನ ಮೂಲದ...

ರಾಯಚೂರು: ಬೊಲೆರೋ ಗೂಡ್ಸ್ ವಾಹನಕ್ಕೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ; ಮಂತ್ರಾಲಯಕ್ಕೆ ತೆರಳುತ್ತಿದ್ದ ಚಿಕ್ಕಮಗಳೂರು ಹಾಗೂ ಹಾಸನ ಮೂಲದ 8 ಮಂದಿ ಸಾವು

- Advertisement -
- Advertisement -

ರಾಯಚೂರು: ಬೊಲೆರೋ ಗೂಡ್ಸ್ ವಾಹನಕ್ಕೆ ಸಿಮೆಂಟ್ ಟ್ಯಾಂಕರ್ ಡಿಕ್ಕಿಯಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ಚಿಕ್ಕಮಗಳೂರು ಹಾಗೂ ಹಾಸನ ಮೂಲದ 8 ಮಂದಿ ಸಾವನ್ನಪ್ಪಿರುವ ಘಟನೆ ಮಂತ್ರಾಲಯದ ಚಿಲಕನಡೋಣ ಬಳಿ ನಡೆದಿದೆ.

ಹಾಸನ, ಚಿಕ್ಕಮಗಳೂರು ಮೂಲದ  ಕುಮಾರ್ (50), ದೀಪಿಕಾ (42) , ಸುನಿಲ್ (40) ಯಶೋಧಮ್ಮ (60),  ಪುಟ್ಟಮ್ಮ (55), ಬೆಳ್ಳಿ (3), ಲೋಲಾಕ್ಷಿ ಹಾಗೂ ಮೀನಾಕ್ಷಿ ಮೃತರು. 

ಇಂದು ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಮಂತ್ರಾಲಯಕ್ಕೆ ಹೋಗುತ್ತಿದ್ದ ಬುಲೆರೋ ವಾಹನಕ್ಕೆ ಬೀದರ್‌ನಿಂದ ತುಮಕೂರಿಗೆ ಹೋಗುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 8 ಜನ ಸಾವನ್ನಪ್ಪಿದ್ದಾರೆ. ಇನ್ನುಳಿದ ಗಾಯಾಳುಗಳನ್ನು ಕರ್ನೂಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Latest News

error: Content is protected !!