Monday, June 8, 2026
Homeಕರಾವಳಿಮಂಗಳೂರುಪುತ್ತೂರು : ಕಲಾವಿದರ ಮನೆಯವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ; ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ...

ಪುತ್ತೂರು : ಕಲಾವಿದರ ಮನೆಯವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ; ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಎರಡನೇ ಪ್ರಕರಣ ದಾಖಲು

- Advertisement -
- Advertisement -

ಪುತ್ತೂರು : ಕಲಾವಿದರ ಮನೆಮಂದಿಗೆ ಅಸಭ್ಯ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಪ್ರಕರಣ ಸಂಬಂಧ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎರಡನೇ ದೂರು ದಾಖಲಾಗಿದೆ.

ಕಲಾವಿದರ ಮನೆಯವರಿಗೆ ಫೋನ್ ಮೂಲಕ ಕರೆ ಮಾಡಿ ಕೀಳು ಮಟ್ಟದ ಶಬ್ದಗಳಿಂದ ಮಹಿಳೆಯ ಗೌರವಕ್ಕೆ ಧಕ್ಕೆ ತಂದು ಬೆದರಿಕೆ ಹಾಕಿ ತೇಜೋವಧೆ ಮಾಡಿದ ಸಂಬಂಧ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಲಾವಿದನ ತಾಯಿ ದೂರು ನೀಡಿದ್ದಾರೆ. ಸದ್ಯ ತಿಮರೋಡಿ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಅಗಿದೆ.

ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಾವಿದ ದಿನೇಶ್ ಕೊಡಪದವು ತಾಯಿ ಬಂಟ್ವಾಳದ ಲೀಲಾವತಿ(71) ನೀಡಿದ ದೂರಿನ ಮೇರೆಗೆ ಏ.13 ರಂದು ಕಲಂ 196(1),352,351(2),79 BNS ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!