ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಏಪ್ರಿಲ್ 12 ರಂದು ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಅವರು ತೀವ್ರ ಉಸಿರಾಟದ ಸಮಸ್ಯೆ ಮತ್ತೆ ಎದೆನೋವಿನಿಂದ ಬಳಲುತ್ತಿದ್ದು, ನಿನ್ನೆಯಷ್ಟೇ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಪರಿಸ್ಥಿತಿಯ ಕಾರಣ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಮಧ್ಯಾಹ್ನದ ವೇಳೆಗೆ ನಿಧನ ಹೊಂದಿದ್ದಾರೆ.
ಆಶಾ ಭೋಸ್ಲೆ ಅವರು ಹಿಂದಿ, ಕನ್ನಡ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಅಸ್ಸಾಮೀಸ್, ಭೋಜ್ಪುರಿ, ನೇಪಾಳಿ, ಬೆಂಗಾಲಿ ಇನ್ನೂ ಹಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.
ಅವರ ಸಾಧನೆಗೆ ಎರಡು ರಾಷ್ಟ್ರಪ್ರಶಸ್ತಿ ಸೇರಿದಂತೆ, ಏಷ್ಯಾ ನೈಟಿಂಗೇಲ್, ಲತಾ ಮಂಗೇಶ್ಕರ್ ಪ್ರಶಸ್ತಿ, ಹಲವಾರು ಫಿಲಂ ಫೇರ್ ಪ್ರಶಸ್ತಿಗಳು ಲಭಿಸಿದೆ. ಆಶಾ ಅವರ ಹಾಡುಗಳು ಮೂರು ಬಾರಿ ಪ್ರತಿಷ್ಠಿತ ಗ್ರಾಮಿಗೆ ನಾಮಿನೇಟ್ ಸಹ ಆಗಿದ್ದವು. ಸುಮಾರು ಲಕ್ಷಕ್ಕೂ ಹೆಚ್ಚು ಹಾಡುಗಳನ್ನು ಅವರು ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ.
ಆಶಾ ಭೊಸ್ಲೆ ಅವರು ಭಾರತದ ಲಿಜೆಂಡರಿ ಗಾಯಕಿ, ಭಾರತ ರತ್ನ ಪುರಸ್ಕೃತ ಲತಾ ಮಂಗೇಶ್ಕರ ಅವರ ಸಹೋದರಿ.


