ಉಡುಪಿ : ವ್ಯಕ್ತಿಯೊಬ್ಬರ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಬಂಧಿಸಿ ಅಪಹರಣಕ್ಕೊಳಗಾದವರನ್ನು ಪೊಲೀಸರು ರಕ್ಷಿಸಿರುವ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತೆಲಂಗಾಣ ತಾಂಡ್ಯ ರಮಾನಾಥ ಶ್ರೀನು (30), ಪಡಮಡಿ ತಾಂಡ್ಯದ ಮೋಹನ್ ರಮವಾತ್ (22), ದೇವರಕೊಂಡ ಚಿಂತಾಲ್ ತಾಂಡಾದ ಪರಮೇಶ್ (30), ಚಿಂತಾಲ್ ತಾಂಡಾದ ಪಾಲ್ತ್ಯ ವಿಜಯ್ (25) ಬಂಧಿತರು.
ಮಣಿಪಾಲದಲ್ಲಿ ರಾಜೇಶ್ ಎಂಬವರನ್ನು ಕಾರಿನಲ್ಲಿ ಬಲಾತ್ಕಾರವಾಗಿ ಕುಳ್ಳಿರಿಸಿ ಅಪಹರಣ ಮಾಡಲಾಗಿತ್ತು. ತೆಲಂಗಾಣದಲ್ಲಿರುವ ವ್ಯವಹಾರದ ವಿಚಾರವಾಗಿ ಅಪಹರಣ ಮಾಡಲಾಗಿತ್ತು ಎಂದು ಅವರ ಸಹೋದರ ಮಣಿಪಾಲ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು, ಮಣಿಪಾಲ ಪೊಲೀಸ್ ನಿರೀಕ್ಷಕರಾದ ಮಹೇಶ ಪ್ರಸಾದ್ ಅವರ ನೇತೃತ್ವದಲ್ಲಿ ಮಣಿಪಾಲ ಪೊಲೀಸ್ ಠಾಣಾ ಪಿಎಸ್ ಐ ತಿಮ್ಮೇಶ್ ಬಿ ಎನ್, ಉಡುಪಿ ಸೈಬರ್ ಪೊಲೀಸ್ ಠಾಣಾ ಪಿ.ಎಸ್.ಐ ಸುದರ್ಶನ್ ದೊಡ್ಡಮನಿ ಹಾಗೂ ಠಾಣಾ ಅಪರಾಧ ಸಿಬ್ಬಂದಿಗಳಾದ ಎಎಸ್‌ಐ ವಿವೇಕಾನಂದ, ಹೆಚ್‌ಸಿ ಮಹಮ್ಮದ್ ಅಜ್ಮಲ್ ಹೈಕಾಡಿ, ಹೆಚ್‌ಸಿ ಚೇತನ್, ಮಲ್ಪೆ ಠಾಣಾ ಹೆಚ್‌ಸಿ ಲೋಕೇಶ್, ಉಡುಪಿ ನಗರ ಠಾಣಾ ಪಿಸಿ ಶಿವಕುಮಾರ್, ಬ್ರಹ್ಮಾವರ ಪೊಲೀಸ್ ಠಾಣಾ ಪಿಸಿ ಕಿರಣ್, ಮಣಿಪಾಲ ಠಾಣಾ ಪಿಸಿ ತಿಮ್ಮಯ್ಯ ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಆರೋಪಿಗಳನ್ನು ತೆಲಂಗಾಣ ರಾಜ್ಯದ ಜಗತಿಹಾಳ್ ಜಿಲ್ಲೆಯ ಮುಖ್ಯ ರಸ್ತೆ ಕರಿಂ ನಗರದ ಗೋವಿಂದಪಲ್ಲಿ ಎಂಬಲ್ಲಿ ವಶಕ್ಕೆ ಪಡೆಯಲಾಗಿದೆ.


