- Advertisement -
![]()
- Advertisement -
ಪುತ್ತೂರು ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಪತಿ ಪತ್ನಿ ಸಹಿತ ಮೂವರನ್ನು ಬಂಧನ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಪೆರಾಜೆ ನಿವಾಸಿ ಅಶ್ರಫ್ ಜಿ (42), ಆತನ ಪತ್ನಿ ಬಂಟ್ವಾಳ ಕೆದಿಲ ನಿವಾಸಿ ಶಮೀಮಾ (32) , ಬಂಟ್ವಾಳ ಪೆರಾಜೆ ನಿವಾಸಿ ಮೊಹಮ್ಮದ್ ಶಮೀಜ್ (18) ಬಂಧಿತರು.
ಪ್ರಕರಣದಲ್ಲಿ ಆರೋಪಿ ಬಂಟ್ವಾಳ ಪೆರಾಜೆ ನಿವಾಸಿ ಅಶ್ರಫ್ ಜಿ ಎಂಬಾತನನ್ನು ವಿಚಾರಣೆಗಾಗಿ ನ್ಯಾಯಾಲಯದಿಂದ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಆತನ ಜೊತೆ ಪ್ರಕರಣದಲ್ಲಿ ಆತನ ಪತ್ನಿ ಶಮೀಮಾ ಹಾಗೂ ಮೊಹಮ್ಮದ್ ಶಮೀಜ್ ಶಾಮೀಲಾಗಿರೋದು ಗೊತ್ತಾಗಿದೆ. ಅದರಂತೆ ಅವರಿಬ್ಬರನ್ನು ದಿನಾಂಕ: 07/04/2026 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
- Advertisement -


