Saturday, June 6, 2026
HomeWorldಭಾರತೀಯರಿಗೆ ಇರಾನ್‌ ನಿಂದ ನಿರ್ಗಮಿಸಲು ಭಾರತೀಯ ರಾಯಭಾರಿ ಕಚೇರಿಯಿಂದ ಸೂಚನೆ

ಭಾರತೀಯರಿಗೆ ಇರಾನ್‌ ನಿಂದ ನಿರ್ಗಮಿಸಲು ಭಾರತೀಯ ರಾಯಭಾರಿ ಕಚೇರಿಯಿಂದ ಸೂಚನೆ

- Advertisement -
- Advertisement -

ನವದೆಹಲಿ: ಭಾರತ ಇರಾನ್ ನಲ್ಲಿರುವ ಭಾರತೀಯ ಪ್ರಜೆಗಳು ತಕ್ಷಣವೇ ಹೊರಡುವಂತೆ ಭಾರತೀಯ ರಾಯಭಾರ ಕಚೇರಿಯು ತಿಳಿಸಿದ್ದು, ಬುಧವಾರ (ಎ.08) ಹೊಸ ಮಾರ್ಗಸೂಚಿಯನ್ನು ಹೊರಡಿಸಿರುವುದಾಗಿ ವರದಿಯಾಗಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಟೆಹ್ರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಇರಾನ್ ನಿಂದ ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಹೊರಡಲು ಅನುಕೂಲವಾಗುವ ಮಾರ್ಗವನ್ನು ಸೂಚಿಸಿರುವುದಾಗಿ ಸಲಹೆ ನೀಡಿದೆ.

ಅಷ್ಟೇಅಲ್ಲದೆ ಯಾವುದೇ ಕಾರಣಕ್ಕೂ ರಾಯಭಾರಿ ಕಚೇರಿಯನ್ನು ಸಂಪರ್ಕಿಸದೇ ಯಾವುದೇ ಅಂತಾರಾಷ್ಟ್ರೀಯ ಗಡಿ ಮೂಲಕ ತೆರಳುವ ಪ್ರಯತ್ನ ಮಾಡಬಾರದೆಂದು ಎಚ್ಚರಿಕೆ ನೀಡಿದೆ.

ಇರಾನ್ ನಲ್ಲಿರುವ ಭಾರತೀಯರು ತುರ್ತು ಸಂಪರ್ಕಕ್ಕಾಗಿ ರಾಯಭಾರ ಕಚೇರಿ ಸಂಪರ್ಕ ನಂಬರ್ ಗಳನ್ನು ಹಂಚಿಕೊಂಡಿದೆ.

ಸಂಪರ್ಕ ಸಂಖ್ಯೆಗಳು: +989128109115, +989128109109, +989128109102, and +989932179359 2. 2- 2: [email protected].

- Advertisement -

Latest News

error: Content is protected !!