- Advertisement -
![]()
- Advertisement -
ವಾಷಿಂಗ್ಟನ್: ಪಾಕಿಸ್ತಾನ, ಈಜಿಪ್ಟ್ ಮತ್ತು ಟರ್ಕಿ ಸೋಮವಾರ ಇರಾನ್ ಮತ್ತು ಅಮೆರಿಕದ ಮುಂದೆ ಪಶ್ಚಿಮ ಏಷ್ಯಾ ಯುದ್ಧ ಮುಂದುವರಿದಿರುವಂತೆಯೇ ಕದನ ವಿರಾಮಕ್ಕೆ ಸಂಬಂಧಿಸಿ ಇಟ್ಟಿರುವಂತಹ ಪ್ರಸ್ತಾಪವನ್ನು ಇರಾನ್ ತಿರಸ್ಕರಿಸಿದೆ.
ಈ ತಿರಸ್ಕಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಟ್ರಂಪ್, ‘ಇರಾನ್ ಒಪ್ಪಂದಕ್ಕೆ ಒಪ್ಪದೇ ಇರುವುದರಿಂದ ಅವರನ್ನು ಸುಮ್ಮನೆ ಬಿಡಲ್ಲ. ಇರಾನ್ ಅನ್ನು ನಾಶ ಮಾಡಲು ನಮಗೆ ಒಂದು ರಾತ್ರಿ ಸಾಕು, ಆ ರಾತ್ರಿ ಮಂಗಳವಾರವೇ ಆಗಿರಬಹುದು’ ಎಂದು ಹೇಳುವ ಮೂಲಕ ಭಾರೀ ದಾಳಿಯ ಸುಳಿವು ನೀಡಿದ್ದಾರೆ. ಹೊರ್ಮುಜ್ ಜಲಸಂಧಿ ತೆರೆಯಲು ಮತ್ತು ಒಪ್ಪಂದಕ್ಕೆ ಬರಲು ಇರಾನ್‌ಗೆ ಟ್ರಂಪ್ ಹಾಕಿದ್ದ ಗಡುವು ಮಂಗಳವಾರ ಮುಗಿಯಲಿರುವಂತೆಯೇ ಈ ಬೆಳವಣಿಗೆ ನಡೆದಿದೆ ಎಂದು ವರದಿಯಾಗಿದೆ.
- Advertisement -


