Saturday, June 13, 2026
Homeಕರಾವಳಿಮಂಗಳೂರುಬೆಳ್ತಂಗಡಿ : ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಅಪರಿಚಿತ ಮೃತದೇಹ ಪತ್ತೆ

ಬೆಳ್ತಂಗಡಿ : ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಅಪರಿಚಿತ ಮೃತದೇಹ ಪತ್ತೆ

- Advertisement -
- Advertisement -

ಬೆಳ್ತಂಗಡಿ : ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಧರ್ಮಸ್ಥಳದ ನೇತ್ರಾವತಿಯಲ್ಲಿ ಪತ್ತೆಯಾಗಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಏ.6 ರಂದು ಮಧ್ಯಾಹ್ನ 1:30 ರ ಸುಮಾರಿಗೆ ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಧರ್ಮಸ್ಥಳ ಪೊಲೀಸರು ಮೃತದೇಹವನ್ನು ಮಹಜರು ನಡೆಸಿ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಮೇಲ್ನೋಟಕ್ಕೆ ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತದೇಹದ ಎತ್ತರ 5.7 ಅಡಿ, ಸಾಧಾರಣ ಶರೀರ, ಮೃತದೇಹವು ಕೊಳೆತಿರುವುದರಿಂದ ಯಾವುದೇ ಚಹರೆ ಗುರುತುಗಳು ಪತ್ತೆಯಾಗಿರುವುದಿಲ್ಲ.

ಧರಿಸಿದ ಬಟ್ಟೆಬರೆಗಳು: ಮೃತದೇಹದ ಮೈಮೇಲೆ ಬಳಿ ಬಣ್ಣದ ಉದ್ದ ತೋಳಿನ ಶರ್ಟ್-01, ಕಪ್ಪು ಬಣ್ಣದ ಪ್ಯಾಂಟ್-01‌, ಬಿಳಿ ಬಣ್ಣದ ಬನಿಯನ್-01‌, ಕಪ್ಪು ಬಣ್ಣದ ಒಳ ಚಡ್ಡಿ-01, ಎಡಕೈ ಗೋಲ್ಡನ್‌ ಕಲರಿನ ವಾಚ್-01, ಎಡಕೈ ಉಂಗುರ ಬೆರಳಿನಲ್ಲಿ ತಿಳಿನೀಲಿ ಬಣ್ಣದ ಕಲ್ಲು ಇರುವ ಲೋಹದ ಉಂಗುರ-01. ಧರಿಸಿರುತ್ತಾರೆ

ಸದ್ರಿ ವ್ಯಕ್ತಿಯ ವಾರೀಸುದಾರರು/ ಸಂಬಂಧಿಕರು ಇದ್ದರೆ ಈ ಕೆಳಕಂಡ ದೂರವಾಣಿಗೆ ಸಂಪರ್ಕಿಸುವರೇ ಕೋರಿಕೆ.

ಧರ್ಮಸ್ಥಳ ಪೊಲೀಸು ಠಾಣೆ: 8277986447, E-Mail ID [email protected]

PSI DHARMASTHALA: 7795424204, 8277986449. CPI BELTHANGADY: 9480805336, Dist Control: 0824-2220500,

- Advertisement -

Latest News

error: Content is protected !!