- Advertisement -
![]()
- Advertisement -
ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಭಿನ್ನಮತ ತಲೆದೋರಿದ್ದು, ರಾಜ್ಯಸಭೆಯಲ್ಲಿ ಎಎಪಿ ಉಪನಾಯಕನ ಸ್ಥಾನದಿಂದ ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಅವರನ್ನು ತೆಗೆದು ಹಾಕಲಾಗಿದೆ.
ರಾಘವ್ ಛಡ್ಡಾ ಸ್ಥಾನಕ್ಕೆ ಪಂಜಾಬ್ ನ ಎಎಪಿ ರಾಜ್ಯಸಭಾ ಸದಸ್ಯ ಅಶೋಕ್ ಮಿತ್ತಲ್ ಅವರನ್ನು ಉಪನಾಯಕರನ್ನಾ್ಗಿ ನೇಮಿಸಲಾಗಿದೆ.
ರಾಜ್ಯಸಭಾ ಸಚಿವಾಲಯಕ್ಕೆ ಬದಲಾವಣೆಯ ಕುರಿತು ಪತ್ರ ರವಾನಿಸಿರುವ ಆಮ್ ಆದ್ಮಿ ಪಕ್ಷ ರಾಘವ್ ಛಡ್ಡಾಗೆ ರಾಜ್ಯಸಭೆಯಲ್ಲಿ ಮಾತನಾಡಲು ಅವಕಾಶ ನೀಡದಂತೆ ಮನವಿ ಮಾಡಿದೆ.
ರಾಘವ್ ಛಡ್ಡಾ 2023 ರಿಂದ ರಾಜ್ಯಸಭೆಯಲ್ಲಿ ಎಎಪಿ ಉಪನಾಯಕರಾಗಿದ್ದರು. ಪಂಜಾಬ್ ನಿಂದ ಏಳು ಮತ್ತು ದೆಹಲಿಯಿಂದ ಮೂರು ಸೇರಿ ಆಮ್ ಆದ್ಮಿ ಪಕ್ಷ ರಾಜ್ಯಸಭೆಯಲ್ಲಿ ಒಟ್ಟು ಹತ್ತು ಸದಸ್ಯರನ್ನು ಹೊಂದಿದೆ.
ಇತ್ತೀಚೆಗೆ ರಾಜ್ಯಸಭೆಯಲ್ಲಿ ಜನಸಾಮಾನ್ಯರ ಹಲವು ಸಮಸ್ಯೆಗಳ ಪರವಾಗಿ ಧ್ವನಿ ಎತ್ತಿ ರಾಘವ್ ಛಡ್ಡಾ ಸುದ್ದಿಯಾಗಿದ್ದರು.
- Advertisement -


