Saturday, June 6, 2026
Homeಅಪರಾಧಸುದೀಪ್ ರೈ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ; ಹನಿ ಟ್ರ್ಯಾಪ್ ಆರೋಪಕ್ಕೆ ಸೌಮ್ಯ ಶೆಟ್ಟಿ ತಿರುಗೇಟು!;...

ಸುದೀಪ್ ರೈ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ; ಹನಿ ಟ್ರ್ಯಾಪ್ ಆರೋಪಕ್ಕೆ ಸೌಮ್ಯ ಶೆಟ್ಟಿ ತಿರುಗೇಟು!; ನಿಷ್ಪಕ್ಷಪಾತ ತನಿಖೆಗೆ ಆಗ್ರಹ

- Advertisement -
- Advertisement -

ಉಡುಪಿ : ಉದ್ಯಮಿ ಸುದೀಪ್ ರೈ ಸಾವಿಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿದ್ದು, ಈ ವೇಳೆ ಸುದೀಪ್‌ ರೈ ಪತ್ನಿ ಸೌಮ್ಯ ಶೆಟ್ಟಿ ಹನಿ ಟ್ರ್ಯಾಪ್ ಆರೋಪಕ್ಕೆ ಸಂಬಂಧಿಸಿದಂತೆ ತಿರುಗೇಟು ನೀಡಿದ್ದಾರೆ.

ಸುದೀಪ್ ರೈ ತಂದೆ ಮತ್ತು ವೇಣೂಗೋಪಾಲ ಶೆಟ್ಟಿ ಅವರು ಮಾಡಿರುವ ಹನಿ ಟ್ರ್ಯಾಪ್ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ತನ್ನ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಮತ್ತು ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಅಷ್ಟೇಅಲ್ಲದೆ ಈ ವೇಳೆಯಲ್ಲಿ ಅವರು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.

ಇನ್ನು ಈ ಘಟನೆಯು ಸುದೀಪ್ ರೈ ಅವರು ತಮ್ಮ ತಂದೆಯ ಮನೆಯಲ್ಲಿದ್ದಾಗಲೇ ನಡೆದಿದ್ದು, ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರಬೇಕು ಎಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!