- Advertisement -
![]()
- Advertisement -
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ ಯುವಕನನ್ನು ರಕ್ಷಣೆ ಮಾಡಿರುವ ಘಟನೆ ಇನ್ನಂಜೆಯಲ್ಲಿ ನಡೆದಿದೆ.
ಕೇರಳದಿಂದ ಮುಂಬೈಗೆ ತೆರಳುತ್ತಿದ್ದ ರೈಲು, ಇನ್ನಂಜೆ ರೈಲು ನಿಲ್ದಾಣದ ಸಮೀಪ ಬಂದಾಗ ಘಟನೆ ನಡೆದಿದೆ. ಕೂಡಲೇ , ಕರ್ತವ್ಯ ನಿರ್ವಸುತ್ತಿದ್ದ ತಪಾಸಣಾಧಿಕಾರಿ ಬಾಬು ಅವರು ಆತನನ್ನು ರಕ್ಷಿಸಿ ಇಂದ್ರಾಳಿಯ ಆರ್ ಪಿ ಎಫ್ ಕಛೇರಿ ವಶಕ್ಕೆ ಒಪ್ಪಿಸಿದರು. ಯುವಕ ಮನೋರೋಗಿ ಎಂದು ತಿಳಿದು ಬಂದಿರುವುದರಿಂದ ರೈಲ್ವೆ ಪೋಲಿಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಯುವಕ ತನ್ನ ಹೆಸರು ಸಹಾದ್ (25) ಕೊಯಿಕೊಡ್ ನಿವಾಸಿ ಎಂದಷ್ಟೆ ಹೇಳಿಕೊಂಡಿದ್ದಾನೆ. ಕಾರ್ಯಾಚರಣೆಯಲ್ಲಿ ಟಿ.ಸಿ ಸುನೀಲ್, ಆರ್.ಪಿ.ಎಫ್ ರವಿಪ್ರಕಾಶ್, ಜೀನ ಪಿಂಟೋ ಭಾಗಿಯಾಗಿದ್ದರು.
- Advertisement -


