- Advertisement -


- Advertisement -
ಮಂಗಳೂರು: ಹಾಲಿನ ಟ್ಯಾಂಕರ್‌ಗೆ ಬೈಕ್ ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಅರ್ಕುಳ ಬಳಿ ನಡೆದಿದೆ. ಫರಂಗಿಪೇಟೆಯ ನಿವಾಸಿ ಮುಹಮ್ಮದ್ ಆಶ್ಫಕ್ (22) ಮೃತ ಬೈಕ್ ಸವಾರ.
ಈತ ಪಡೀಲ್ ಕಡೆಯಿಂದ ಕೆಟಿಎಂ ಬೈಕಿನಲ್ಲಿ ಫರಂಗಿಪೇಟೆ ಕಡೆಗೆ ತೆರಳುತ್ತಿದ್ದಾಗ ಅರ್ಕುಳ ಸೇತುವೆಯ ಬಳಿ ಡಿಕ್ಕಿ ಸಂಭವಿಸಿದೆ. ಮಂಗಳೂರಿನಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಕೆಎಂಎಫ್ ಸೇರಿದ ಹಾಲಿನ ಟ್ಯಾಂಕರಿಗೆ ಬೈಕ್ ಡಿಕ್ಕಿಯಾಗಿದೆ.
ಬೈಕ್ ಹಿಂದಿನಿಂದ ಡಿಕ್ಕಿಯಾಗಿದ್ದರಿಂದ ಸವಾರ ಆಶ್ಫಕ್ ತೀವ್ರ ಗಾಯಗೊಂಡಿದ್ದು ಬಳಿಕ ಅಡ್ಯಾರಿನ ಖಾಸಗಿ ಆಸ್ಪತ್ರೆಗೆ ತರಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ತರುತ್ತಿದ್ದಾಗ ಮೃತಪಟ್ಟಿದ್ದಾನೆ. ಕಂಕನಾಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


