Thursday, June 4, 2026
Homeಕರಾವಳಿಮಂಗಳೂರುಬಂಟ್ವಾಳ: ರೌಡಿಶೀಟರ್ ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ: ಕೊಲೆಗೆ ಬಳಸಲಾಗಿದ್ದ ಕಾರು ಬುಡೋಳಿಯಲ್ಲಿ ಪತ್ತೆ

ಬಂಟ್ವಾಳ: ರೌಡಿಶೀಟರ್ ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ: ಕೊಲೆಗೆ ಬಳಸಲಾಗಿದ್ದ ಕಾರು ಬುಡೋಳಿಯಲ್ಲಿ ಪತ್ತೆ

- Advertisement -
- Advertisement -

ಬಂಟ್ವಾಳ: ರೌಡಿಶೀಟರ್ ಟ್ಯಾಬ್ಲೆಟ್ ಆರೀಫ್ ಕೊಲೆಗೆ ಬಳಸಲಾಗಿದ್ದ ಕಾರು ವಿಟ್ಲ ಠಾಣಾ ವ್ಯಾಪ್ತಿಯ ಬುಡೋಳಿ ಎಂಬಲ್ಲಿ  ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಮುಂಜಾನೆ ರೌಡಿಶೀಟರ್ ರೌಡಿಶೀಟರ್ ಟ್ಯಾಬ್ಲೆಟ್ ಆರೀಫ್ ಎಂದಿನಂತೆ ಬೈಕಿನಲ್ಲಿ ತನ್ನ ಮೀನು ಮಾರಾಟದ ಸೆಂಟರ್ ಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ತಂಡ ಬೈಕಿಗೆ ಹಿಂಬದಿಂದ ಡಿಕ್ಕಿ ಹೊಡೆದು ನೆಲಕ್ಕುರುಳಿಸಿ ತಲವಾರಿನಿಂದ ಭೀಕರವಾಗಿ ಕಡಿದು ಕೊಂದು ಕಾರಿನಲ್ಲಿ ಪರಾರಿಯಾಗಿತ್ತು.

ಮಾಣಿ ಸಮೀಪದ ಬುಡೋಳಿಯ ರಾಷ್ಟ್ರೀಯ ಹೆದ್ದಾರಿಯ ಬಳಿ ಕಾರೊಂದು ಸಂಶಯಾಸ್ಪದ ರೀತಿಯಲ್ಲಿ  ರೀತಿಯಲ್ಲಿ ಇರುವ ಕುರಿತು ಮಾಹಿತಿ ಲಭಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ವಿಟ್ಲ ಠಾಣಾ ಎಸ್ ಐ ಪ್ರಕಾಶ್ ದೇವಾಡಿಗ ಕಾರನ್ನು ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!