- Advertisement -
![]()
- Advertisement -
ಬಂಟ್ವಾಳ: ಕೆಲಸಕ್ಕೆಂದು ಮನೆಯಿಂದ ಹೋದ ಯುವತಿ ಮನೆಗೆ ವಾಪಾಸ್ ಬಾರದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಮುಲಾರಪಟ್ಟದಲ್ಲಿ ನಡೆದಿದೆ.
ಮುಲಾರಪಟ್ಟ ಆಝಾದ್ ನಗರ ನಿವಾಸಿ ಅಬ್ದುಲ್ ರಶೀದ್ ಅವರ ಪುತ್ರಿ ಫಾತಿಮತ್ ಇಪ್ರಾ (18) ನಾಪತ್ತೆಯಾದ ಯುವತಿ. ಪಿಯುಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಕಂಪ್ಯೂಟರ್ ತರಬೇತಿ ಪಡೆದಿದ್ದ ಫಾತಿಮತ್ ಇಪ್ರಾ, ಬಿ.ಸಿ.ರೋಡ್‌ನ ಸೈಬರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್ 24ರಂದು ಕೆಲಸಕ್ಕೆ ತೆರಳಿದ ಅವರು, ಬಳಿಕ ಮನೆಗೆ ಮರಳದೇ ಕಾಣೆಯಾಗಿದ್ದಾರೆ. ಯುವತಿ ಕೆಲಸ ಮಾಡುತ್ತಿದ್ದ ಸ್ಥಳದ ಮಾಲೀಕರಾದ ಮನ್ನೂರು ಅವರಲ್ಲಿ ವಿಚಾರಿಸಿದಾಗ, ಆ ದಿನ ಫಾತಿಮತ್ ಇಪ್ರಾ ಕೆಲಸಕ್ಕೆ ಬಂದಿರಲಿಲ್ಲ ಎಂದಿದ್ದಾರೆ. ಈ ಸಂಬಂಧ ಯುವತಿಯ ತಾಯಿ ರಝೀಯಾ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


