Thursday, June 4, 2026
Homeಕರಾವಳಿಉಡುಪಿಉಡುಪಿ: ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗಲೇ ರಕ್ತ ವಾಂತಿ ಮಾಡಿ ಪ್ರಯಾಣಿಕ ಸಾವು

ಉಡುಪಿ: ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗಲೇ ರಕ್ತ ವಾಂತಿ ಮಾಡಿ ಪ್ರಯಾಣಿಕ ಸಾವು

- Advertisement -
- Advertisement -

ಉಡುಪಿ: ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗಲೇ ರಕ್ತ ವಾಂತಿ ಮಾಡಿ ಪ್ರಯಾಣಿಕ ಸಾವನ್ನಪ್ಪಿರುವ ಘಟನೆ ಎಂ.ಜಿ.ಎಂ ಕಾಲೇಜು ಸಮೀಪ ನಡೆದಿದೆ. ಕುಂದಾಪುರದ ನಿವಾಸಿ ಸಂತೋಷ್(45) ಮೃತರು.

ಸಂತೋಷ್ ಅವರು ಖಾಸಗಿ ಸಿಟಿ ಬಸ್ಸಿನಲ್ಲಿ ಮಣಿಪಾಲದಿಂದ ಉಡುಪಿಗೆ ಪ್ರಯಾಣಿಸುತ್ತಿದ್ದಾಗ, ಎಂ.ಜಿ.ಎಂ ಕಾಲೇಜು ಸಮೀಪ ರಕ್ತವಾಂತಿ ಪ್ರಾರಂಭವಾಗಿ,  ಆರೋಗ್ಯ ಸ್ಥಿತಿ ಗಂಭೀರಗೊಂಡಿದೆ. ತಕ್ಷಣ ಬಸ್ಸಿನ ಮಾಲಿಕ ಮಧುಸೂದನ್ ಶೆಟ್ಟಿ, ಸಮಾಜಸೇವಕ ನಿತ್ಯಾನಂದ‌ ಒಳಕಾಡುವರಿಗೆ ಮಾಹಿತಿ ನೀಡಿದರು. ಸಿಟಿ ಬಸ್ಸು ನಿಲ್ದಾಣದಡೆಗೆ ಅಂಬುಲೆನ್ಸ್ ವಾಹನದಲ್ಲಿ ಧಾವಿಸಿ ಬಂದ ಒಳಕಾಡುವರು, ಸಂತೋಷ್ ಅವರನ್ನು ಬಸ್ಸಿನ ನಿರ್ವಾಹಕ, ಹಾಗೂ ಸ್ಥಳದಲ್ಲಿದ್ದ ಕಾಲೇಜು ವಿದ್ಯಾರ್ಥಿಗಳ ನೆರವಿನಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ. ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ ರೋಗಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ನೀಡಲಾಯಿತು. ಆದರೆ ವ್ಯಕ್ತಿ ಚಿಕಿತ್ಸೆ ಫಲಿಸದೇ ಅವರು  ಸಾವನಪ್ಪಿದ್ದಾರೆ .

- Advertisement -

Latest News

error: Content is protected !!