Tuesday, June 9, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಶ್ರೀರಾಮ ಕ್ರೆಡಿಟ್ ಕೋ ಆಪರೇಟ್ ಸೊಸೈಟಿಯಲ್ಲಿ ವಂಚನೆ ಪ್ರಕರಣ; ಪ್ರಕರಣದ ತನಿಖೆಗಾಗಿ ಸೊಸೈಟಿಗೆ...

ಬೆಳ್ತಂಗಡಿ : ಶ್ರೀರಾಮ ಕ್ರೆಡಿಟ್ ಕೋ ಆಪರೇಟ್ ಸೊಸೈಟಿಯಲ್ಲಿ ವಂಚನೆ ಪ್ರಕರಣ; ಪ್ರಕರಣದ ತನಿಖೆಗಾಗಿ ಸೊಸೈಟಿಗೆ ಎಂಟ್ರಿಯಾದ ಸಿಐಡಿ ಟೀಂ

- Advertisement -
- Advertisement -

ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ) ಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂಪಾಯಿ ಹಣವನ್ನು ವಾಪಾಸ್ ನೀಡದೆ (ವಂಚನೆ) ಹಗರಣ ಮಾಡಿರುವ ಪ್ರಕರಣ ಸಂಬಂಧ ಮಾ.17 ರಂದು ಬೆಳಗ್ಗೆ ಸೊಸೈಟಿಗೆ ಬೆಂಗಳೂರಿನಿಂದ ಸಿಐಡಿ ತನಿಖಾ ತಂಡ ಆಗಮಿಸಿ ತನಿಖೆ ಆರಂಭಿಸಿದೆ.

ಪ್ರಕರಣದ ವಿವರ: ಬೆಳ್ತಂಗಡಿ ನಗರದ ಜ್ಯೂನಿಯರ್ ಕಾಲೇಜ್ ರಸ್ತೆಯಲ್ಲಿರುವ ರಾಮನಗರದ ವಿ.ಆರ್.ನಾಯಕ್ ಕಾಂಪೌಂಡ್ ನಲ್ಲಿ ಸುಮಾರು 25 ವರ್ಷಗಳಿಂದ ಏಕೈಕ ಬ್ರಾಂಚ್ ಆಗಿ ಕಾರ್ಯಾಚರಿಸುತ್ತಿರುವ ಶ್ರೀ ರಾಮ ಕ್ರೆಡಿಟ್‌ ಕೋ ಆಪರೇಟಿವ್ ಸೊಸೈಟಿ(ರಿ) ನಲ್ಲಿ ಆಡಳಿತ ಮಂಡಳಿಯವರು ಗ್ರಾಹಕರಿಗೆ ಸೇರಿದ ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂಪಾಯಿ ಹಣ ವಾಪಸ್ ಗ್ರಾಹಕರಿಗೆ ನೀಡದೆ ವಂಚನೆ ಮಾಡಿರುವುದು ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಂಚನೆಗೊಳಗಾದ ಬೆಳ್ತಂಗಡಿ ನಿವಾಸಿ ದಯಾನಂದ ನಾಯಕ್ ಸೇರಿ ಒಟ್ಟು 13 ಜನ ನೊಂದವರು 22-05-2025 ರಂದು ಸೊಸೈಟಿಯ 14 ಜನರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ 23-05-2025 ರಂದು KARNATAKA PROTECTION OF INTEREST DEPOSITIONS EXORBITANT ACT 2004 (u/s -9) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ಹೋಗಿ ಇದೀಗ ಸಿಐಡಿಗೆ ಹಸ್ತಾಂತರವಾಗಿ ತನಿಖೆ ಆರಂಭವಾಗಿದೆ.

ಪ್ರಕರಣ 14 ಮಂದಿ ಆರೋಪಿಗಳು: 2021 ರಿಂದ 2024 ರ ವರೆಗೆ ಬ್ಯಾಂಕ್ ನಲ್ಲಿ ಜವಾಬ್ದಾರಿಯಲ್ಲಿದ್ದ 40 ಕೋಟಿ ರೂಪಾಯಿ ಹಣ (ವಂಚನೆ) ಹಗರಣದ ರೂವಾರಿಗಳಾದ ಬ್ಯಾಂಕ್ ಸಿಇಒ ಚಂದ್ರಕಾಂತ್, ಅಧ್ಯಕ್ಷ ಪ್ರಭಾಕರ ಸಿ.ಹೆಚ್,ಉಪಾಧ್ಯಕ್ಷ ಸದಾನಂದ.ಎಮ್ ಉಜಿರೆ, ಡೈರೆಕ್ಟರ್ ಗಳಾದ ವಿಶ್ವನಾಥ.ಆರ್.ನಾಯಕ್, ಪ್ರಮೋದ್.ಆರ್‌.ನಾಯಕ್, ವಿಶ್ವನಾಥ, ಜಗನ್ನಾಥ.ಪಿ, ರತ್ನಾಕರ, ಸುಮ ದಿನೇಶ್ ಉಜಿರೆ ನಯನ ಶಿವಪ್ರಸಾದ್, ಮೋಹನ್ ದಾಸ್.ಕೆ, ಕಿಶೋರ್ ಕುಮಾರ್ ಲಾಯಿಲ, ಬ್ಯಾಂಕ್ ಸಿಬ್ಬಂದಿ ಸರಿತಾ.ಎಸ್ ಮತ್ತು ವಿನೋದ್ ಕುಮಾರ್.ಸಿ.ಹೆಚ್ ಸೇರಿ ಒಟ್ಟು 14 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಪ್ರತ್ಯಕ್ಷ ವರದಿಯಾಗಿದೆ.

ದೂರು ನೀಡಿದ್ದ 13 ಮಂದಿ ನೊಂದವರು: ದಯಾನಂದ ನಾಯಕ್, ನಿಧೀಶ್‌.ಡಿ.ನಾಯಕ್, ಶ್ರದ್ಧಾ.ಬಿ ,ಮಾಲಿನಿ.ಟಿ.ರಾವ್, ತುಕರಾಮ್ ರಾವ್, ಅಕ್ಷಯಾ.ಟಿ.ರಾವ್, ಅಕ್ಷತಾ ರಾವ್, ಚೈತ್ರಾ ಭಟ್, ಮೈತ್ರಿ ಭಟ್, ಸ್ವಾತಿ ಭಟ್, ನಂದಕುಮಾರ್, ಬಿ.ಗಣೇಶ್ ಭಟ್, ವಿದ್ಯಾ ಭಟ್ ಸೇರಿ 13 ಮಂದಿ ನೊಂದವರು ದೂರು ನೀಡಿದ್ದರು.

ಆಸ್ತಿ ಮುಟ್ಟುಗೋಲಿಗೆ ನೊಟೀಸ್ ಜಾರಿ:  ಅಧ್ಯಕ್ಷ ಸಿ.ಹೆಚ್.ಪ್ರಭಾಕರ, ನಿರ್ದೇಶಕರಾದ ವಿಶ್ವನಾಥ.ಆರ್.ನಾಯಕ್, ವಿಶ್ವನಾಥ, ಪ್ರಮೋದ್.ಆರ್.ನಾಯಕ್, ಕಿಶೋರ್ ಲಾಯಿಲ, ಪಿ.ಜಗನ್ನಾಥ್, ರತ್ನಾಕರ ಶೇರಿಗಾರ್, ನಯನ ಶಿವಪ್ರಸಾದ್, ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ.ಚಂದ್ರಕಾಂತ್,ಸಿಬ್ಬಂದಿ ಸರಿತಾ ಇವರು ಹತ್ತು ಮಂದಿಗೆ ಸಹಕಾರ ಸಂಘಗಳ ಉಪ ನಿಬಂಧಕರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನ್ಯಾಯಾಲಯದಿಂದ 05-06-2025 ರಂದು ನೋಟಿಸ್ ಜಾರಿಯಾಗಿತ್ತು. ಇಲ್ಲವಾದರೆ 30,45,24,278 (ಮೂರು ಕೋಟಿ ನಲವತ್ತೈದು ಲಕ್ಷದ ಇಪ್ಪತೈದು ಸಾವಿರದ ಇನ್ನೂರ ಇಪ್ಪತ್ತೆಂಟು ರೂಪಾಯಿ) ಭದ್ರತಾ ಠೇವಣಿ ಇಡಲು ಅವಕಾಶ ನೀಡಲಾಗಿತ್ತು. ಈ ನೊಟೀಸ್ ವಿರುದ್ಧ ಹೈಕೋರ್ಟ್ ಹೋಗಿ ಸ್ಟೇ ತಂದಿದ್ದರು. ಈ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವರದಿ ಮಾಡಿತ್ತು.

ಸಿಐಡಿ ತನಿಖೆ ಆರಂಭ: 40 ಕೋಟಿ ವಂಚನೆ ಪ್ರಕರಣವಾಗಿರುವ ಕಾರಣದಿಂದ ಈ ತನಿಖೆಯನ್ನು ಬೆಳ್ತಂಗಡಿ ಪೊಲೀಸರು ಮಂಗಳೂರು ಸೆನ್ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದರು ಬಳಿಕ ದಕ್ಷಿಣ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿಗಳು ಸಿಐಡಿ( Crime Investigation Department) ಗೆ ಹಸ್ತಾಂತರಿಸಿದ ಹಿನ್ನೆಲೆಯಲ್ಲಿ ಇದೀಗ ಅಧಿಕೃತವಾಗಿ ಬೆಂಗಳೂರು ಸಿಐಡಿ ಇನ್ಸ್‌ಪೆಕ್ಟರ್ ಹರೀಶ್ ನೇತೃತ್ವದ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ. ಈ ಸಿಐಡಿ ತನಿಖೆ ನಡೆಸುವ ಬಗ್ಗೆ 23-05-2025 ರಂದು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ನಲ್ಲಿ ಪೊಲೀಸ್ ಮೂಲಗಳ ಮಾಹಿತಿ ಆಧಾರದಲ್ಲಿ ಸೊಸೈಟಿ ಹಗರಣವನ್ನು ಸಿಐಡಿ ತನಿಖೆ ನಡೆಸಲಿದೆ ಎಂದು ಅಂದೇ ಖಚಿತವಾಗಿ ವರದಿಯನ್ನು ಪ್ರಸಾರ ಮಾಡಿತ್ತು.

- Advertisement -

Latest News

error: Content is protected !!