Saturday, June 6, 2026
Homeಕರಾವಳಿಉಡುಪಿಉಡುಪಿ: ಹೋಟೆಲ್‌ನ ಕೊಠಡಿಯಲ್ಲಿ ಸೆಕ್ಯೂರಿಟಿ ಗಾರ್ಡ್ ನೇಣು ಬಿಗಿದುಕೊಂಡು ಆತ್ಮಹತ್ಯೆ

ಉಡುಪಿ: ಹೋಟೆಲ್‌ನ ಕೊಠಡಿಯಲ್ಲಿ ಸೆಕ್ಯೂರಿಟಿ ಗಾರ್ಡ್ ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ಉಡುಪಿ: ಹೋಟೆಲ್‌ನ ಕೊಠಡಿಯಲ್ಲಿ ಸೆಕ್ಯೂರಿಟಿ ಗಾರ್ಡ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಿನ್ಸನ್ (39) ಮೃತ ದುರ್ದೈವಿ.

ಮಂಗಳೂರು ನಿವಾಸಿ ಪ್ಲೋರಿನ್ ಮರಿಯಾಲ್ ಎಸ್ (32) ಅವರು ನೀಡಿದ ದೂರಿನ ಪ್ರಕಾರ, ಅವರ ಪತಿ ಜಿನ್ಸನ್ (39) ಅವರು ಸೆಕ್ಯುರಿಟಿ ಗಾರ್ಡ್ ಹಾಗೂ ಕೋಸ್ಟಲ್ ಗಾರ್ಡ್ ಕೆಲಸ ಮಾಡುತ್ತಿದ್ದರು. ದಿನಾಂಕ 14/03/2026 ರಂದು ಮಧ್ಯಾಹ್ನ ಸುಮಾರು 3:30 ಗಂಟೆಗೆ ಜಿನ್ಸನ್ ಅವರು ಬೆಂಗಳೂರಿನಲ್ಲಿ ಇರುವ ತಮ್ಮ ಸ್ನೇಹಿತ ನೌಫಲ್ ಅವರ ಹೋಟೆಲ್‌ನಲ್ಲಿ ಕೆಲಸದ ವಿಚಾರವಾಗಿ ಮಾತನಾಡಲು ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದರು.

ಆದರೆ ರಾತ್ರಿ ಸುಮಾರು 10:00 ಗಂಟೆಗೆ ಪತ್ನಿ ಫೋನ್ ಕರೆ ಮಾಡಿದರೂ ಜಿನ್ಸನ್ ಅವರು ಕರೆ ಸ್ವೀಕರಿಸಿರಲಿಲ್ಲ. ದಿನಾಂಕ 15/03/2026 ರಂದು ಮಧ್ಯಾಹ್ನ ಸುಮಾರು 2:45 ಗಂಟೆಗೆ ಪಿರ್ಯಾದುದಾರರ ಅತ್ತೆ, ಜಿನ್ಸನ್ ಅವರ ತಾಯಿ ಅವರಿಗೆ ಉಡುಪಿಯ ಹೋಟೆಲ್‌ನಲ್ಲಿ ಜಿನ್ಸನ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಡುಪಿ ಪೊಲೀಸರು ಮಾಹಿತಿ ನೀಡಿದರೆಂದು ತಿಳಿದುಬಂದಿದೆ.

ಪ್ರಾಥಮಿಕವಾಗಿ, ಯಾವುದೋ ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಜಿನ್ಸನ್ ಅವರು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!