Saturday, June 13, 2026
Homeಕರಾವಳಿಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಭಟ್ಟ ಧೈವಾಧೀನ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಭಟ್ಟ ಧೈವಾಧೀನ

- Advertisement -
- Advertisement -

ಬಂಟ್ವಾಳ: ತಾಲೂಕಿನ ಐತಿಹಾಸಿಕ ಹಿನ್ನಲೆಯ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ದೇವಳದ ಪ್ರಧಾನ ಅರ್ಚಕರಾಗಿದ್ದ ಶ್ರೀಯುತ ನಾರಾಯಣ ಭಟ್ಟರು ಭಾನುವಾರದಂದು ರಾತ್ರಿ ಧೈವಾಧೀನರಾಗಿದ್ದಾರೆ.

ದೇವಾಲಯದಲ್ಲಿ ದೈನಂದಿನ ಮತ್ತು ವಿಶೇಷ ಪೂಜೆಗಳನ್ನು ಪ್ರಧಾನ ಅರ್ಚಕರಲ್ಲಿ ಓರ್ವರಾದ ನಾರಾಯಣ ಭಟ್ ಅವರ ಆಶ್ರಯದಲ್ಲಿ ನಡೆಸಲಾಗುತ್ತಿತ್ತು.

ಶ್ರೀಯುತರು ಪೊಳಲಿ ದಿ. ಪದ್ಮನಾಭ ಭಟ್ ಅವರ ಪುತ್ರರಾಗಿದ್ದು, ಪರಂಪರೆಯಾಗಿ ಬಂದಿರುವ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಸುಮಾರು 50 ವರ್ಷ ಮೇಲ್ಪಟ್ಟು ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಸಹೋದರರು, ಸಹೋದರಿಯರು ಹಾಗೂ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸೂಸೆಯಂದಿರು, ಅಳಿಯ ಮತ್ತು ಮೊಮ್ಮಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!