Monday, June 8, 2026
Homeಕರಾವಳಿಉಡುಪಿಉಡುಪಿ : ಅಬಕಾರಿ ಡಿಸಿಗೆ ಸಂಬಂಧಿಸಿದ 15 ಕಡೆ ಲೋಕಾಯುಕ್ತ ದಾಳಿ; 8 ಕೋಟಿ 69...

ಉಡುಪಿ : ಅಬಕಾರಿ ಡಿಸಿಗೆ ಸಂಬಂಧಿಸಿದ 15 ಕಡೆ ಲೋಕಾಯುಕ್ತ ದಾಳಿ; 8 ಕೋಟಿ 69 ಲಕ್ಷ ಮೌಲ್ಯದ ಅಕ್ರಮ ಅಸ್ತಿ-ಪಾಸ್ತಿ ಪತ್ತೆ

- Advertisement -
- Advertisement -

ಉಡುಪಿ : ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದಡಿ ಉಡುಪಿ ಜಿಲ್ಲಾ ಅಬಕಾರಿ ಡಿಸಿ  ಶ್ರೀನಿವಾಸ್. ಟಿ. ಎಮ್ ಅವರಿಗೆ ಸಂಬಂಧಿಸಿದ  15 ಕಡೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 8 ಕೋಟಿ 69 ಲಕ್ಷ ಮೌಲ್ಯದ ಅಕ್ರಮ ಅಸ್ತಿ-ಪಾಸ್ತಿ ಪತ್ತೆ ಮಾಡಿದ್ದಾರೆ.

ಶೋಧನಾ ಕಾರ್ಯಾಚರಣೆ ಮಾ.11 ರಿಂದ ಮಾ.12 ರವೆಗೆ ನಡೆದಿದ್ದು, ಈ ಸಮಯದಲ್ಲಿ 11 ನಿವೇಶನಗಳು, 6 ವಾಸದ ಮನೆಗಳು, 31 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ 6,90,64,716/ ರೂಪಾಯಿ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದೆ. ಅಲ್ಲದೇ 3,95,941 ರೂಪಾಯಿ ನಗದು, ರೂ 1,47,50,506 ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳು, ರೂ 17,00,000 ರೂಪಾಯಿ ಬೆಲೆ ಬಾಳುವ ವಾಹನಗಳು, ರೂ. 25,75,000 ರೂಪಾಯಿ ಬೆಲೆಬಾಳುವ ಬ್ಯಾಂಕ್ ಠೇವಣಿ, ರೂ. 72,68,554 ರೂಪಾಯಿ ಬೆಲೆಬಾಳುವ ಇತರೆ ವಸ್ತುಗಳು ಸೇರಿ ಒಟ್ಟು 2,66,90,001 ರೂಪಾಯಿ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಎಲ್ಲಾ ಸೇರಿ ಒಟ್ಟು 8,69,23,435 ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ದಿನೇಶ್ ಕುಮಾರ್, ಡಿವೈಎಸ್ಪಿ ಡಾ.ಗಾನ.ಪಿ.ಕುಮಾರ್, ಸುರೇಶ್ ಕುಮಾರ್, ಉಡುಪಿ ವಿಭಗಾದ ಡಿವೈಎಸ್ಪಿ ಹಲಮೂರ್ತಿ ರಾವ್, ಬೆಂಗಳೂರು ವಿಭಾಗದ ಡಿವೈಎಸ್ಪಿ ರಾಜೇಶ್, ಪ್ರದೀಪ್ ಕುಮಾರ್, ಮಂಗಳೂರು ವಿಭಾಗದ ಇನ್ಸ್‌ಪೆಕ್ಟರ್ ಶ್ರೀಮತಿ ಭಾರತಿ, ಚಂದ್ರಶೇಖರ್, ಉಡುಪಿ ವಿಭಾಗದ ಇನ್ಸ್‌ಪೆಕ್ಟರ್ ಮಂಜುನಾಥ್, ರಾಜೇಂದ್ರ ನಾಯಕ್, ಮಂಡ್ಯ ವಿಭಾಗದ ಇನ್ಸ್‌ಪೆಕ್ಟರ್ ರವಿ ಕುಮಾರ್,ಬೆಂಗಳೂರು ವಿಭಾಗದ ಇನ್ಸ್‌ಪೆಕ್ಟರ್ ಬಸವರಾಜ್,ರಾಜಶೇಖರ್ ಅಯ್ಯ,ರಾಘು ನಾಯ್ಕ್ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -

Latest News

error: Content is protected !!