Friday, June 5, 2026
Homeತಾಜಾ ಸುದ್ದಿಮಧ್ಯ ಪ್ರಾಚ್ಯದಲ್ಲಿ ಮುಂದುವರಿದ ಯುದ್ಧ; ಕುಡಿಯುವ ನೀರಿನ ಘಟಕಗಳನ್ನು ಟಾರ್ಗೆಟ್ ಮಾಡಿದ ಇರಾನ್

ಮಧ್ಯ ಪ್ರಾಚ್ಯದಲ್ಲಿ ಮುಂದುವರಿದ ಯುದ್ಧ; ಕುಡಿಯುವ ನೀರಿನ ಘಟಕಗಳನ್ನು ಟಾರ್ಗೆಟ್ ಮಾಡಿದ ಇರಾನ್

- Advertisement -
- Advertisement -

ಟೆಹರಾನ್: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ತನ್ನ ಮೇಲೆ ದಾಳಿ ಮಾಡಲು ಅಮೆರಿಕಕ್ಕೆ ಅವಕಾಶ ಮಾಡಿಕೊಟ್ಟ ರಾಷ್ಟ್ರಗಳ ಮೇಲೆ ಸಮರ ಸಾರಿರುವ ಇರಾನ್‌ ಈಗ ಆ ದೇಶಗಳ ಕುಡಿಯುವ ನೀರಿನ ಘಟಕಗಳನ್ನು ಟಾರ್ಗೆಟ್ ‌ಮಾಡಲಾರಂಭಿಸಿದೆ.

ಬಹರೈನ್ ಸೇರಿದಂತೆ ಇತರ ಮುಸ್ಲಿಂ ರಾಷ್ಟ್ರಗಳಲ್ಲಿರುವ ಅಮೆರಿಕಾದ ಸೇನಾ ನೆಲೆಗಳು ಮತ್ತು ವಾಣಿಜ್ಯ ಕಟ್ಟಡಗಳ ಮೇಲೆ ದಾಳಿ ನಡೆಸಿದ ಬಳಿಕ ಈಗ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತನೆ ಮಾಡುವ ಡಿಸಾಲಿನೇಶನ್‌ ಘಟಕಗಳ ಮೇಲೆ ಇರಾನ್ ದಾಳಿ ಮಾಡುತ್ತಿದೆ.

ಬಹರೈನ್‌ನಲ್ಲಿ ಕುಡಿಯುವ ನೀರಿನ ಘಟಕಗಳ ಮೇಲೆ ಮಾಡಿದ ದಾಳಿಯಿಂದಾಗಿ ಶೇಕಡಾ 75 ರಷ್ಟು ಘಟಕ ನಾಶವಾಗಿದ್ದು, ಬಹರೈನ್ ಕುಡಿಯುವ ನೀರಿನ ಸಂಕಷ್ಟ ಎದುರಿಸುವಂತಾಗಿದೆ.

ಕತಾರ್‌, ಬಹರೈನ್‌, ಒಮಾನ್‌, ಕುವೈತ್‌ ಮತ್ತು ಸೌದಿ ಅರೇಬಿಯಾ ದೇಶಗಳು ಕುಡಿಯುವ ನೀರಿಗಾಗಿ ಡಿಸಾಲಿನೇಶನ್‌ ಘಟಕಗಳನ್ನೇ ಅವಲಂಬಿಸಿವೆ.ಹೀಗಾಗಿ ಇರಾನ್‌ ಈಗ ಈ ದೇಶಗಳಲ್ಲಿ ಡಿಸಾಲಿನೇಶನ್ ಘಟಕಗಳನ್ನೇ ಟಾರ್ಗೆಟ್‌ ಮಾಡಲಾರಂಭಿಸಿದೆ.

- Advertisement -

Latest News

error: Content is protected !!