Saturday, June 6, 2026
Homeಕರಾವಳಿಮಂಗಳೂರುಬಂಟ್ವಾಳ: ಕೋಳಿ ಅಂಕಕ್ಕೆ ಪೊಲೀಸರ ದಾಳಿ: ಮೂವರ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ: ಕೋಳಿ ಅಂಕಕ್ಕೆ ಪೊಲೀಸರ ದಾಳಿ: ಮೂವರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಬಂಟ್ವಾಳ: ಬಂಟ್ವಾಳ ಬಾಳ್ತಿಲ ಗ್ರಾಮದ ಸಣ್ಣಕುಕ್ಕು ಎಂಬಲ್ಲಿ 04.03.2026  ರಂದು ಸಂಜೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಆಡುತ್ತಿರುವ ಬಗ್ಗೆ  ರವೀಂದ್ರ  ಎಂ, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಬಂಟ್ವಾಳ ನಗರ ಪೊಲೀಸ್ ಠಾಣೆರವರಿಗೆ ಮಾಹಿತಿ ಬಂದ ಮೇರೆಗೆ, ಠಾಣಾ  ಸಿಬ್ಬಂದಿಯೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಹೋದಾಗ, ಅಲ್ಲಿ ಹಿಂಸಾತ್ಮಕವಾಗಿ ಹಣವನ್ನು ಪಣವಾಗಿಟ್ಟು  ಕೋಳಿಅಂಕ ನಡೆಯುತ್ತಿರುವುದು ಕಂಡುಬಂದಿದೆ. ಈ ವೇಳೆ ಕೋಳಿ ಅಂಕದಲ್ಲಿ  ತೊಡಗಿಕೊಂಡಿದ್ದ ಮೂವರನ್ನು ಹಿಡಿದು ವಿಚಾರಿಸದಾಗ, ಅವರುಗಳು ಬಂಟ್ವಾಳ ನಿವಾಸಿಗಳಾದ ಸೇಸಪ್ಪ (50), ಶೇಖರ (53) ಹಾಗೂ ಭಾನು ಪ್ರಕಾಶ್ (28) ಎಂಬುದಾಗಿ ತಿಳಿದುಬಂದಿರುತ್ತದೆ. ಮುಂದಿನ ಕಾನೂನುಕ್ರಮಕ್ಕಾಗಿ ಸ್ಥಳದಲ್ಲಿದ್ದ 03 ಅಂಕದ ಕೋಳಿಗಳನ್ನು, ರೂ 1030/- ನಗದು ಹಣ ಹಾಗೂ ಕೋಳಿ ಅಂಕಕ್ಕೆ ಬಳಸುವ ಸಣ್ಣ ಕತ್ತಿ ( ಬಾಲ್) ಗಳನ್ನು ಸ್ವಾಧೀನಪಡಿಸಿ ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ ನಂ: 28/2026 ಕಲಂ 87,93 K P Act ಮತ್ತು ಕಲಂ 11(1)(m)(ii),  11(1)(n), Prevention Of Animal Crulty Act 1960 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!