Wednesday, June 24, 2026
Homeಕರಾವಳಿಮಂಗಳೂರುಮಂಗಳೂರು ಮಹಾನಗರ ಪಾಲಿಕೆ ಸುರತ್ಕಲ್ ವಲಯದ ಕಂದಾಯ ಅಧಿಕಾರಿ ಸುಶಾಂತ್ ವಿಧಿವಶ

ಮಂಗಳೂರು ಮಹಾನಗರ ಪಾಲಿಕೆ ಸುರತ್ಕಲ್ ವಲಯದ ಕಂದಾಯ ಅಧಿಕಾರಿ ಸುಶಾಂತ್ ವಿಧಿವಶ

- Advertisement -
- Advertisement -

ಮಂಗಳೂರು ಸಹಕಾರಿ ನೌಕರರ ಸಂಘದ ಅಧ್ಯಕ್ಷ ಮಂಗಳೂರು ಮಹಾನಗರ ಪಾಲಿಕೆ ಸುರತ್ಕಲ್ ವಲಯದ ಕಂದಾಯ ಅಧಿಕಾರಿ ಹಾಗೂ ಕದ್ರಿ ಕಛೇರಿಯಲ್ಲಿ ಪರಿಸರ ಅಭಿಯಂತರ ಇಲಾಖೆಯ ಅಧಿಕಾರಿ ಸುಶಾಂತ್ ಕೆ. ನಿಧನರಾಗಿದ್ದಾರೆ.

ಕಳೆದ 29 ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಶಾಂತ್ ಕೆ ಅಲ್ಪಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು ಇಂದು ನಿಧನರಾಗಿದ್ದಾರೆ.

ಮ.ನ.ಪಾ ವ್ಯಾಪ್ತಿಯ ಬಳ್ಳಾಲ್ ಬಾಗ್ ನಲ್ಲಿ ಆರೋಗ್ಯ ಇಲಾಖಾ ಅಧಿಕಾರಿಯಾಗಿ ಬಳಿಕ ಸುರತ್ಕಲ್ ಗೆ ಕಂದಾಯ ಇಲಾಖಾ ಅಧಿಕಾರಿಯಾಗಿ ಮುಂಭಡ್ತಿ ಹೊಂದಿದ್ದರು.ಮೃತರು ಪತ್ನಿ, ಹಾಗೂ ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!