Sunday, June 7, 2026
Homeಆರಾಧನಾದಹಿಸರ್ ರಾವಲ್ಪಾಡ ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದಲ್ಲಿ 26ನೇ ವರ್ಷದ ವಾರ್ಷಿಕ ಮಹಾಪೂಜಾ ಮಹೋತ್ಸವ

ದಹಿಸರ್ ರಾವಲ್ಪಾಡ ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದಲ್ಲಿ 26ನೇ ವರ್ಷದ ವಾರ್ಷಿಕ ಮಹಾಪೂಜಾ ಮಹೋತ್ಸವ

- Advertisement -
- Advertisement -

ಮುಂಬೈ: ಇಲ್ಲಿನ ದಹಿಸರ್ (ಪೂರ್ವ) ರಾವಲ್‌ಪಾಡಾದಲ್ಲಿರುವ ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದಲ್ಲಿ 26ನೇ ವರ್ಷದ ವಾರ್ಷಿಕ ಮಹಾಪೂಜಾ ಮಹೋತ್ಸವವು ಮಾ. 14 ಶನಿವಾರದಂದು ಅತ್ಯಂತ ವೈಭವದಿಂದ ಜರುಗಲಿದೆ.

ಮಾರ್ಚ್ 13, 14 ಮತ್ತು 15, 2026 ರಂದು ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಈ ಸಂಭ್ರಮ ನಡೆಯಲಿದೆ ಎಂದು ದೇವಸ್ಥಾನದ ಸಮಿತಿ ತಿಳಿಸಿದೆ.

ಕಾರ್ಯಕ್ರಮದ ವಿವರಗಳು:
ಮಾರ್ಚ್ 13, ಶುಕ್ರವಾರ, ಬೆಳಿಗ್ಗೆಯಿಂದಲೇ ಸಾಮೂಹಿಕ ಪ್ರಾರ್ಥನೆ, ಮಹಾಗಣಪತಿ ಹೋಮ ಹಾಗೂ ಸತ್ಯನಾರಾಯಣ ಪೂಜೆ ನೆರವೇರಲಿದೆ. ಸಂಜೆ ಮಹಿಳಾ ವಿಭಾಗದಿಂದ ಅರಿಶಿನ-ಕುಂಕುಮ ಕಾರ್ಯಕ್ರಮ ಹಾಗೂ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ.

ಮಾರ್ಚ್ 14, ಶನಿವಾರದಂದು ದೇವಸ್ಥಾನದ 26ನೇ ವರ್ಷದ ಮಹಾಪೂಜೆ ನಡೆಯಲಿದ್ದು, ಬೆಳಿಗ್ಗೆ ಶನಿ ದೇವರಿಗೆ ಮತ್ತು ಚಾಮುಂಡೇಶ್ವರಿ ದೇವಿಗೆ ನವಕಲಶ ಅಭಿಷೇಕ ನಡೆಯಲಿದೆ. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಶನಿವಾರ ಸಂಜೆ 5:30ರಿಂದ ಚಾಮುಂಡಿ-ಗುಳಿಗ ದೈವಗಳ 5ನೇ ವರ್ಷದ ಗಗ್ಗರ ಸೇವೆ (ಕೋಲ) ನಡೆಯಲಿದೆ.

ಮಾರ್ಚ್ 15, ಭಾನುವಾರ ಬೆಳಿಗ್ಗೆ ಚಾಮುಂಡಿ-ಗುಳಿಗ ದೈವಗಳಿಗೆ ಪಂಚಗಜ್ಜಾಯ ಸೇವೆ ಮತ್ತು ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

ದೇವಸ್ಥಾನದ ಸ್ಥಾಪಕ ಅರ್ಚಕರಾದ ಶ್ರೀ ಚಿನ್ನಪ್ಪ ವಿ. ಪೂಜಾರಿ ಮತ್ತು ದೇವಿ ಪಾತ್ರಿಗಳಾದ ಶ್ರೀ ರೋಹಿತ್ ಸಿ. ಪೂಜಾರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಸಮಿತಿಯ ಅಧ್ಯಕ್ಷರಾದ ಕೃಷ್ಣ ಎಮ್. ಶೆಟ್ಟಿ, ಉಪಾಧ್ಯಕ್ಷ ಜನಾರ್ದನ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಭಕ್ತಾದಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಲು ವಿನಂತಿಸಿದ್ದಾರೆ.

- Advertisement -

Latest News

error: Content is protected !!