- Advertisement -
![]()
- Advertisement -
ಉಪ್ಪಿನಂಗಡಿ: ರಾಮ ಲಕ್ಷ್ಮಣ ಆರ್ಕೆಡ್ ಮಾಲೀಕ ಹಾಗೂ ಕ್ಲಾಸಿಕ್ ಮೆನ್ಸ್ ವೇರ್ ಟೈಲರಿಂಗ್ ಶಾಪ್ ನ ಮಾಲೀಕ ಯು. ಕೆ. ರೋಹಿತಾಕ್ಷ (47) ರವರು ಅಲ್ಪ ಕಾಲದ ಅನಾರೋಗ್ಯದಿಂದಾಗಿ ಫೆ.24ರಂದು ವಿಧಿವಶರಾಗಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ, ಹಿಂದೂ ಪರ ಸಂಘಟನೆಗಳಲ್ಲಿ, ಉಪ್ಪಿನಂಗಡಿ ಶ್ರೀ ಮಾಧವ ಶಿಶು ಮಂದಿರದ ಸಂಸ್ಥಾಪಕ ಜೊತೆ ಕಾರ್ಯದರ್ಶಿಯಾಗಿ, ಟೈಲರ್ಸ್ ಅಸೋಸಿಯೇಶನ್ ಸಂಸ್ಥೆಯ ಅಧ್ಯಕ್ಷನಾಗಿ ಹಲವಾರು ಸಾಮಾಜಿಕ ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಚಿರಪರಿಚಿತರಾಗಿದ್ದ ಇವರು, ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಮೃತರು ತಾಯಿ, ಪತ್ನಿ, ಒರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.
- Advertisement -


