Tuesday, June 23, 2026
Homeಕರಾವಳಿಮಂಗಳೂರುಪುತ್ತೂರು : ಸಹಪಾಠಿಯಿಂದಲೇ ಯುವತಿ ತಾಯಿಯಾದ ಪ್ರಕರಣ : ಆತ್ಮಹತ್ಯೆಗೆ ಯತ್ನಿಸಿದ್ರಾ ಸಂತ್ರಸ್ತ ಯುವತಿ?

ಪುತ್ತೂರು : ಸಹಪಾಠಿಯಿಂದಲೇ ಯುವತಿ ತಾಯಿಯಾದ ಪ್ರಕರಣ : ಆತ್ಮಹತ್ಯೆಗೆ ಯತ್ನಿಸಿದ್ರಾ ಸಂತ್ರಸ್ತ ಯುವತಿ?

- Advertisement -
- Advertisement -

ಪುತ್ತೂರು : ಸಹಪಾಠಿಯಿಂದಲೇ ಯುವತಿ ತಾಯಿಯಾದ ಪ್ರಕರಣದ ಸಂತ್ರಸ್ತ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

ಈ ಪ್ರಕರಣದಲ್ಲಿ ಜೆ. ಕೃಷ್ಣ ರಾವ್ ತಾನು ಮಗುವಿನ ತಂದೆ ಅಲ್ಲ ಎಂದು ಹೇಳಿದ್ದನು. ಹೀಗಾಗಿ ಡಿಎನ್‌ಎ ಪರೀಕ್ಷೆ ಕೂಡ ನಡೆದು, ಆತನೇ ಮಗುವಿನ ತಂದೆ ಎಂಬುದು ಸಾಬೀತಾಗಿತ್ತು. ಜೊತೆಗೆ ಈ ಪ್ರಕರಣದಲ್ಲಿ ಆತ ಜೈಲಿಗೂ ಹೋಗಿ ಬಂದಿದ್ದ. ಆದರೆ ಆತ ಯಾವುದೇ ಶಿಕ್ಷೆ ಇಲ್ಲದೇ ಎರಡೇ ತಿಂಗಳಿಗೆ ಜೈಲಿನಿಂದ ಹೊರಗೆ ಬಂದಿದ್ದ. ಅಲ್ಲದೇ ಯುವತಿಯನ್ನು ಮದುವೆಯಾಗಲು ನಿರಾಕರಿಸುತ್ತಲೇ ಬಂದಿದ್ದಾನೆ. ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಇದರಿಂದ ಯುವತಿ ಖಿನ್ನತೆಗೆ ಜಾರಿದ್ದಳು ಎನ್ನಲಾಗಿದೆ.

ಅಲ್ಲದೇ ಯುವತಿಗೆ ಸಾಮಾಜದಲ್ಲಿ ವ್ಯಾಪಕವಾದ ಟೀಕೆಗಳು ಕೇಳಿ ಬಂದಿದ್ದವು. ಸೋಶಿಯಲ್ ಮೀಡಿಯಾದಲೂ ಈ ಸುದ್ದಿಗಳಿಗೆ ಯುವತಿಯನ್ನು ನಿರಂತರವಾಗಿ ಹೀಗೆಳೆಯುವುದು ನಡೆಯುತ್ತಿತ್ತು. ಇದರಿಂದಾಗಿ ಮನದನೊಂದ ಯುವತಿಗೆ ಸಾಯುವುದಕ್ಕೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ಕೂಡಲೇ ಯುವತಿಯ ಮನೆಯವರು ಗಮನಿಸಿ ತಕ್ಷಣ ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

.

- Advertisement -

Latest News

error: Content is protected !!