Tuesday, June 23, 2026
Homeಕರಾವಳಿರಾಷ್ಟ್ರೀಯ ಮಟ್ಟದ 400ನೇ ‘ಐಎಂಎಸ್‌ಸಿ ಆಫ್ ರೋಡ್ ಟ್ರೋಫಿ-2026’ ಮೋಟಾರ್ ರ್‍ಯಾಲಿ

ರಾಷ್ಟ್ರೀಯ ಮಟ್ಟದ 400ನೇ ‘ಐಎಂಎಸ್‌ಸಿ ಆಫ್ ರೋಡ್ ಟ್ರೋಫಿ-2026’ ಮೋಟಾರ್ ರ್‍ಯಾಲಿ

- Advertisement -
- Advertisement -

ಮಂಗಳೂರು: ರಾಷ್ಟ್ರೀಯ ಮಟ್ಟದ 400ನೇ ‘ಐಎಂಎಸ್‌ಸಿ ಆಫ್ ರೋಡ್ ಟ್ರೋಫಿ-2026’ ಮೋಟಾರ್ ರ್‍ಯಾಲಿಯನ್ನು ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಮಾ.28 ಮತ್ತು 29ರಂದು ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಮಂಗಳೂರಿನ ಗಂಜಿಮಠದ ಒಡ್ಡೂರು ಫಾರ್ಮ್‌ನಲ್ಲಿ ಆಯೋಜಿಸಲಾಗಿದೆ.

ಈ ಬಗ್ಗೆ ಮಾಹಿತಿಯನ್ನು ನೀಡಿದ ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಅಶ್ವಿನ್ ನಾಯಕ್, ʻಈ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಕ್ಲಬ್ 25ನೇ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದು, ಈ ರೋಮಾಂಚನಕಾರಿ ರ್‍ಯಾಲಿಯಲ್ಲಿ ಮಹಾರಾಷ್ಟ್ರ, ಗೋವಾ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ 400ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. ಮೊದಲ ದಿನವಾದ ಮಾ.28ರಂದು ಮಹಿಳಾ ವಿಭಾಗ, ಜೂನಿಯರ್ ವಿಭಾಗ, ಮಾಸ್ಟರ್ಸ್ ವಿಭಾಗ, ಜಿಮ್ನಿ ವಿಭಾಗ, ಥಾರ್ 2020, ಎಸ್‌ಯುವಿ, ಸ್ಟಾಕ್ ಡೀಸೆಲ್, ಸ್ಟಾಕ್ ಪೆಟ್ರೋಲ್ ವಿಭಾಗಗಳಲ್ಲಿ, ಎರಡನೇ ದಿನವಾದ ಮಾ.29ರಂದು ಮೋಡಿಫೈಡ್
ಪೆಟ್ರೋಲ್, ಮೋಡಿಫೈಡ್ ಡೀಸೆಲ್, ಓಪನ್ ಕ್ಲಾಸ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.

ವಿಜೇತರಿಗೆ ಒಟ್ಟು 15 ಲಕ್ಷ ರೂ. ನಗದು ಬಹುಮಾನ, ಟ್ರೋಫಿಯನ್ನು ನೀಡಲಾಗುವುದು. ಈ ಮೋಟಾರ್‌ ರ್‍ಯಾಲಿಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಮಹಿಳೆಯರಿಗಾಗಿ ಎರೈವ್ ಆ್ಯಂಡ್ ಡ್ರೈವ್ ವ್ಯವಸ್ಥೆ ಇದ್ದು ವಾಹನ ಇಲ್ಲದವರು ಕೂಡ ಆಗಮಿಸಬಹುದು. ಅವರಿಗೆ ಸ್ಪರ್ಧೆಗಾಗಿ ವಾಹನವನ್ನು ಸ್ಥಳದಲ್ಲಿಯೇ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

- Advertisement -

Latest News

error: Content is protected !!