Tuesday, June 23, 2026
Homeಕರಾವಳಿವಕೀಲರ ಧ್ವನಿಯಾಗಿ ಕೆಲಸ ಮಾಡುವೆ ಎಂದ ಖ್ಯಾತ ವಕೀಲ ನಾರಾಯಣ ಸ್ವಾಮಿ

ವಕೀಲರ ಧ್ವನಿಯಾಗಿ ಕೆಲಸ ಮಾಡುವೆ ಎಂದ ಖ್ಯಾತ ವಕೀಲ ನಾರಾಯಣ ಸ್ವಾಮಿ

- Advertisement -
- Advertisement -

ಬೆಳ್ತಂಗಡಿ : ರಾಜ್ಯದ ವಕೀಲರ ಶ್ರೇಯೋಭಿವೃದ್ದಿ ಮತ್ತು ವಕೀಲರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ರಾಜ್ಯ ವಕೀಲರ ಪರಿಷತ್ ಚುನಾವಣೆಯ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ಬೆಂಗಳೂರು ಹೈಕೋರ್ಟ್ ನ ಖ್ಯಾತ ವಕೀಲರಾದ ನಾರಾಯಣ ಸ್ವಾಮಿ ಜಿ ಹೇಳಿದರು.

ರಾಜ್ಯದ ವಿವಿಧ ವಕೀಲರ ಸಂಘಕ್ಕೆ ಭೇಟಿ ನೀಡಿ ಮತ ಪ್ರಚಾರ ಮಾಡುತ್ತಿರುವ ಖ್ಯಾತ ವಕೀಲರಾದ ನಾರಾಯಣ ಸ್ವಾಮಿ ಜಿ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಕೀಲರ ಸಂಘ, ಬೆಳ್ತಂಗಡಿ ವಕೀಲರ ಸಂಘದ ಸದಸ್ಯ ವಕೀಲರ ಬಳಿಗೆ ಫೆ.21 ಮತ್ತು 22 ರಂದು ಆಗಮಿಸಿ ಮತ ನೀಡಿ ಸೇವೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಯಲ್ಲಿ ನಾರಾಯಣ ಸ್ವಾಮಿ ಅವರ ಹುಟ್ಟುಹಬ್ಬದ ಪ್ರಯುಕ್ತ ಫೆ.23 ರಂದು ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿ ಮತ್ತು ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಆರ್ಶೀವಾದ ಪಡೆದು ಕೊಂಡು ಮತ್ತೆ ಮಂಗಳೂರು ವಕೀಲರ ಸಂಘದ ಸದಸ್ಯರ ಬಳಿಗೆ ತೆರಳಿದ್ದಾರೆ.

ರಾಜ್ಯಾದ್ಯಂತ ವಕೀಲರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ವಕೀಲರ ಬೇಡಿಕೆಗಳಿಗೆ ಪೂರಕ ಸ್ಪಂದನೆ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳ ಪರಿಹಾರಕ್ಕೆ ಬದ್ದನಾಗಿ ಕೆಲಸ ಮಾಡುವೆ. ವಕೀಲರಿಗೆ ಆರೋಗ್ಯ ವಿಮೆ ಸೇರಿ ಪ್ರಮುಖ ಯೋಜನೆ ಜಾರಿ ಮಾಡುವುದು,ಸಂಕಷ್ಟದಲ್ಲಿರುವ ಹಿರಿಯ ವಕೀಲರ ನೇರವಿಗೆ ಧಾವಿಸುವೆ. ವಕೀಲರ ರಕ್ಷಣೆಗೆ ಕಾನೂನು ರೂಪಿಸುವ ನಿಟ್ಟಿನಲ್ಲಿ ಅಗತ್ಯವಿದ್ದು, ವಕೀಲರ ಸೇವೆಗಾಗಿ ರಾಜ್ಯ ವಕೀಲರ ಪರಿಷತ್ ಚುನಾವಣಾ ಸ್ಥಾನಕ್ಕೆ ಸ್ಪರ್ಧಿಸಿರುವ ನನಗೆ ಅಮೂಲ್ಯ ಮತ ನೀಡಿ ಸೇವೆಗೆ ಅವಕಾಶ ನೀಡಬೇಕೆಂದು ಖ್ಯಾತ ವಕೀಲರಾದ ನಾರಾಯಣ ಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

- Advertisement -

Latest News

error: Content is protected !!