Tuesday, June 9, 2026
Homeಕರಾವಳಿಮಂಗಳೂರುಬಂಟ್ವಾಳ : ರಿಕ್ಷಾ ಪಲ್ಟಿಯಾಗಿ ಮಹಿಳೆ ದುರ್ಮರಣ

ಬಂಟ್ವಾಳ : ರಿಕ್ಷಾ ಪಲ್ಟಿಯಾಗಿ ಮಹಿಳೆ ದುರ್ಮರಣ

- Advertisement -
- Advertisement -

ಬಂಟ್ವಾಳ : ರಿಕ್ಷಾ ಪಲ್ಟಿಯಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಮಾರಿಪಳ್ಳ ಸಮೀಪದ ಕಡೆಗೋಳಿ ಎಂಬಲ್ಲಿ ನಡೆದಿದೆ. ಮಂಗಳೂರು ನಿವಾಸಿ, ವಿಶಾಲಾಕ್ಷಿ (45) ಮೃತ ಮಹಿಳೆ.

ಮಂಗಳೂರು ಕಡೆಯಿಂದ ಬರುತ್ತಿರುವ ವೇಳೆ ಕಡೆಗೋಳಿ ಜಂಕ್ಷನ್ ನಲ್ಲಿ ಬೈಕ್ ಸವಾರನೋರ್ವ ಎದುರುಗಡೆ ಕ್ರಾಸ್ ಆಗಿದ್ದು, ರಿಕ್ಷಾ ಬೈಕ್ ಗೆ ಡಿಕ್ಕಿಯಾಗಿ, ಬಳಿಕ ನಿಯಂತ್ರಣ ತಪ್ಪಿ ರಿಕ್ಷಾ ಎದುರುಭಾಗದಲ್ಲಿ ನಿಂತಿದ್ದ ಮತ್ತೊಂದು ರಿಕ್ಷಾಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ರಿಕ್ಷಾದಲ್ಲಿ ವಿಶಾಲಾಕ್ಷಿ ಅವರ ತಂಗಿ ಹಾಗೂ ಅವರ ಇಬ್ಬರು ಮಕ್ಕಳು ಕೂಡ ಪ್ರಯಾಣಿಸುತ್ತಿದ್ದರು. ಆದರೆ ಚಾಲಕ ಸಹಿತ ನಾಲ್ವರು ಸಣ್ಣ ಪುಟ್ಟ ಗಾಯಗಳಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಆದರ್ಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!